ಸಿಲಿಕಾನ್ ನಲ್ಲಿಂದು ಮಳೆ ಸಂಭವ

ಸಿಲಿಕಾನ್ ನಲ್ಲಿಂದು ಮಳೆ ಸಂಭವ

ಬೆಂಗಳೂರು, ಡಿ. 3 : ಬೆಂಗಳೂರಿನಲ್ಲಿ ವಾರದಿಂದ ಮೋಡ ಕವಿದ ವಾತಾವರಣವಿದ್ದು, ಶನಿವಾರದಿಂದ ಆಗಾಗ ತುಂತುರು ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಬೆಳಗ್ಗಿನಿಂದಲೇ ಚಳಿಯ ಜೊತೆಗೆ ಮೋಡ ಕವಿದ ವಾತಾವರಣವಿದ್ದು, ತಾಪಮಾನ 22ºC , ಗಾಳಿ 3.7 , ತೇವಾಂಶ 0.84 ದಾಖಲಾಗಿದೆ.
ತಮಿಳುನಾಡಿನಲ್ಲಿ ಸುರಿಯುತ್ತಿರುವ ನಿರಂತರ ಮಳೆಯ ಕಾರಣ ಕೂಡ ಬೆಂಗಳೂರು ಹವಾಮಾನದ ಮೇಲೆ ಪರಿಣಾಮ ಬೀರಿದೆ. ಮಧ್ಯಾಹ್ನ ವೇಳೆ ಬೆಂಗಳೂರಿನಲ್ಲಿ ಮಳೆಯಾಗುವ ಸಂಭವವಿದೆ ಬಿಟ್ಟು ಬಿಟ್ಟು ತುಂತುರು ಮಳೆ ಬರಲಿದ್ದು, ಸಂಜೆಯ ವೇಳೆಗೆ ಮಳೆ ನಿಲ್ಲಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos