ಬೆಂಗಳೂರು: ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದರು ಸಹ ಅಂದುಕೊಂಡಷ್ಟು ರಾಜ್ಯದಲ್ಲಿ ಮಳೆ ಆಗಿರಲಿಲ್ಲ. ಇದರಿಂದ ನೀರಿಗೆ ರಾಜ್ಯದಲ್ಲಿ ಬರ ಬಂದಿತ್ತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದೆಲ್ಲಡೆ ಸ್ವಲ್ಪ ಮಟ್ಟಿಗೆ ಮಳೆ ಆರಂಭವಾಗುತ್ತಿದೆ. ನೆನ್ನೆ ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರ ಸ್ವಲ್ಪ ಹೆಚ್ಚಾಗಿಯೇ ಇದ್ದು ಇದರಿಂದ ಸಿಲಿಕಾನ್ ಸಿಟಿಯ ರಸ್ತೆಗಳು ಹಾಗೂ ಚರಂಡಿಗಳು ನೀರಿನಿಂದ ಆವೃತ್ತಿಯಾಗಿದೆ.
ಭರ್ಜರಿ ಮಳೆಯಿಂದಾಗಿ ನಗರದಲ್ಲಿ ಕೆಲವು ಕಡೆ ಟ್ರಾಫಿಕ್ ಸಮಸ್ಯೆಗಳು ಕೂಡ ಎದುರಾಗಿವೆ. ರಾತ್ರಿ ಸುರಿದ ಮಳೆಗೆ ಕಾಳೇನ ಅಗ್ರಹಾರ ಸಮೀಪದ ಡೆಕಾತ್ಲಾನ್ ಬಳಿಯ ಬೆಂಗಳೂರು-ಬನ್ನೇರುಘಟ್ಟ ರಸ್ತೆ ಜಲಾವೃತಗೊಂಡಿದೆ. ಇದರಿಂದ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಸದ್ಯ ವಾಹನ ಸವಾರರ ಸಂಕಷ್ಟ ತಿಳಿಯುತ್ತಿದ್ದಂತೆ ನೀರು ರಸ್ತೆಗೆ ಬರದಂತೆ ತಡೆಯಲು ಟ್ರಾಫಿಕ್ ಪೊಲೀಸರು ಜೆಸಿಬಿ ಮೂಲಕ ರಸ್ತೆಗಿಳಿದು ಜಲ್ಲಿಕಲ್ಲು ಹಾಕಿ ರಸ್ತೆಗೆ ನೀರು ಬರದಂತೆ ತಡೆದಿದ್ದಾರೆ.
ರಾತ್ರಿ ಸುರಿದ ಮಳೆಯಿಂದಾಗಿ ಬೆಂಗಳೂರು-ಬನ್ನೇರುಘಟ್ಟ ರಸ್ತೆ ಕೆರೆಯಂತಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆಯಲ್ಲಿ ಮಳೆ ನೀರು ನಿಂತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಪ್ರತಿ ಬಾರಿ ಮಳೆ ಸುರಿದಾಗಲೂ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದೆ. ಅಲ್ಲದೆ ರಸ್ತೆ ಕಾಮಗಾರಿ, ಬಿಡಬ್ಲ್ಯೂಎಸ್ಎಸ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದರಿಂದ ರಸ್ತೆ ಸಂಪೂರ್ಣ ಜಲಾವೃತಗೊಂಡು ಸವಾರರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ಬೆಳಿಗ್ಗೆಯಿಂದಲೂ ಶಾಲೆ, ಆಫೀಸ್ಗಳಿಗೆ ಹೋಗುವವರು ಸಂಕಷ್ಟ ಎದುರಿಸುತ್ತಿದ್ದಾರೆ. ಸದ್ಯ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಆಗಮಿಸಿದ್ದು ಜೆಸಿಬಿ ಮೂಲಕ ಜಲ್ಲಿಕಲ್ಲು ಹಾಕಿ ರಸ್ತೆಗೆ ನೀರು ಬರದಂತೆ ತಡೆಗಟ್ಟಲು ಮುಂದಾಗಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಬಾರದ ಹಿನ್ನೆಲೆ ಟ್ರಾಫಿಕ್ ಪೊಲೀಸರೇ ಕ್ರಮಕ್ಕೆ ಮುಂದಾಗಿದ್ದು ನೀರು ರಸ್ತೆಗೆ ಬರುತ್ತಿರುವ ಜಾಗದಲ್ಲಿ ಅಡ್ಡ ಹಾಕಲು ಜೆಸಿಬಿ ತಂದಿದ್ದಾರೆ.