ಸಿಲಿಕಾನ್ ಸಿಟಿಯಲ್ಲಿ ಮಳೆ ಮುನ್ಸೂಚನೆ! ಬಿ ಬಿ ಎಂ ಪಿ ಆಯುಕ್ತ ಹೆಚ್ಚರಿಕೆ

ಸಿಲಿಕಾನ್ ಸಿಟಿಯಲ್ಲಿ ಮಳೆ ಮುನ್ಸೂಚನೆ! ಬಿ ಬಿ ಎಂ ಪಿ ಆಯುಕ್ತ ಹೆಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದರು ಸಹ ಅಂದುಕೊಂಡಷ್ಟು ರಾಜ್ಯದಲ್ಲಿ ಸಹ ಮಳೆ ಆಗಿರಲಿಲ್ಲ ಇದರಿಂದ ನೀರಿಗೆ ರಾಜ್ಯದಲ್ಲಿ ಬರ ಬಂದಿತ್ತು ಆದರೆ ಈಗ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದೆಲ್ಲಡೆ ಸ್ವಲ್ಪ ಮಟ್ಟಿಗೆ ಮಳೆ ಆರಂಭವಾಗುತ್ತಿದೆ ಆದರೆ ನೆನ್ನೆ ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರ ಸ್ವಲ್ಪ ಹೆಚ್ಚಾಗಿಯೇ ಇದ್ದು ಇದರಿಂದ ಸಿಲಿಕಾನ್ ಸಿಟಿಯ ರಸ್ತೆಗಳು ಹಾಗೂ ಚರಂಡಿಗಳು ನೀರಿನಿಂದ ಆವೃತ್ತಿಯಾಗುತ್ತದೆ.
ನಗರದಲ್ಲಿ ತಡವಾಗಿಯಾದ್ರೂ ಮಳೆಗಾಲ ಆರಂಭವಾಗೋ ಎಲ್ಲ ಲಕ್ಷಣಗಳೂ ಕಾಣ್ತಿದೆ. ಹವಾಮಾನ ಇಲಾಖೆ ಕೂಡ ಈ ಬಗ್ಗೆ ಮುನ್ಸೂಚನೆ ಕೊಟ್ಟಿದೆ. ಹೀಗಿರುವಾಗ ನಮ್ಮ ಬೆಂಗಳೂರು ಮಳೆಯನ್ನು ಸ್ವಾಗತಿಸಲು ಸಜ್ಜಾಗಿದ್ಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತೆ. ಯಾಕಂದ್ರೆ ಕಾಲುವೆಗಳಲ್ಲಿ ಹರಿಯಬೇಕಿರೋ ಮಳೆ ನೀರು ಬೇರೆ ವಿಧಿಯಿಲ್ಲದೇ ರಸ್ತೆಯಲ್ಲಿ ಹರಿಯುತ್ತೆ. ಯಾಕಂದ್ರೆ ಆ ರಾಜಕಾಲುವೆಗಳ ಮೇಲೆ ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಅನೇಕ ಬಿಲ್ಡಿಂಗ್‌ಗಳು ತಲೆಯೆತ್ತಿವೆ. ಅವುಗಳನ್ನು ತೆರವು ಮಾಡಲು ಈ ಹಿಂದೆ ಹೈಕೋರ್ಟ್‌ ಸೂಚನೆ ನೀಡಿದ್ರೂ ಕೂಡ ಪಾಲಿಕೆ(BBMP) ಹಾಗು ಜಿಲ್ಲಾಧಿಕಾರಿಗಳ ತಂಡ ವಿಫಲವಾಗಿತ್ತು. ಹೀಗಾಗಿ ನಿನ್ನೆ ಮತ್ತೊಂದು ಸುತ್ತಿನ ಸಭೆ ಸೇರಿದ್ದ ಪಾಲಿಕೆಯ ಹಿರಿಯ ಅಧಿಕಾರಿಗಳು ತೆರವು ಮಾಡಲು ಸಜ್ಜಾಗಿದ್ದೇವೆ ಎಂದಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಸಭೆ ಸೇರಲಾಗಿತ್ತು. ವಿಶೇಷ ಆಯುಕ್ತರಾದ ಹರೀಶ್ ಕುಮಾರ್ ಹಾಗು ತ್ರಿಲೋಕ ಚಂದ್ರ ಭಾಗಿಯಾಗಿದ್ರು. ಅಷ್ಟೇ ಅಲ್ಲದೇ ಎಲ್ಲ ವಲಯಗಳ ಜೆಸಿ, ಸಿಇ ಹಾಗು ಕೂಡ ಹಾಜರಿದ್ರು. ಸಭೆಯಲ್ಲಿ ಯಾವುದೇ ಕಾರಣಕ್ಕೂ ಈ ಬಾರಿ ತೆರವು ವಿಚಾರದಲ್ಲಿ ನಿರ್ಲಕ್ಷ ವಹಿಸದಂತೆ ಸೂಚಿಸಲಾಗಿದೆ. ಇನ್ನು, ಒತ್ತುವರಿ ತೆರವು ವಿಚಾರವಾಗಿ ಸರ್ಕಾರ ಕೆರೆಗೆ ಸಂಬಂಧಿಸಿದಂತೆ ಹಾಗು ಕಾಲುವೆಗೆ ಸಂಬಂಧಿಸಿದಂತೆ ಒಂದು ನೋಟಿಫಿಕೇಶನ್ ಹೊರಡಿಸಿದೆ. ಅದರ ಅನ್ವಯ ಕಾಲುವೆ ಒತ್ತುವರಿ ವಿಚಾರವಾಗಿ ಪ್ರತಿಯೊಂದು ಕಿಲೋಮೀಟರ್ ಒತ್ತುವರಿ ಪತ್ತೆಹಚ್ಚಲು ಒಬ್ಬ ಇಂಜಿನಿಯರ್‌ಗೆ ಜವಾಬ್ದಾರಿ ನೀಡಲಾಗಿದೆ. ಅವರ ನೇತೃತ್ವದಲ್ಲಿ ಯಾರ ಅವಧಿಯಲ್ಲಿ ಕರ್ತವ್ಯ ಲೋಪ ಅಂತ ರಿಪೋರ್ಟ್ ಮಾಡಬೇಕು. ಪೂರ್ಣವಾದ ತೆರವು ರಿಪೋರ್ಟ್ ಹಾಗು ಕರ್ತವ್ಯ ಲೋಪ ರಿಪೋರ್ಟ್ ಪಾಲಿಕೆಗೆ ಸಲ್ಲಿಸಬೇಕು. 10 ದಿನಗಳಲ್ಲಿ ಅವರಿಗೆ ನೀಡಿರೋ ಟಾಸ್ಕ್ ಮಾಡಿಲ್ಲವಾದ್ರೆ ಆ ಎಂಜಿನಿಯರ್ ವಿರುದ್ದ ಕ್ರಮ ಜರುಗಿಸಲಾಗುತ್ತೆ. ಇದೇ ರೀತಿ 10 ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ 3 ದಿನಗಳ ಸಮಯ ನೀಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos