ಶತ್ರುಘ್ನ ಸಿನ್ಹಾ ಪಕ್ಷ ತೊರೆದಿದ್ದಕ್ಕೆ ‘ಬಿಜೆಪಿ ಭೀಷ್ಮ’ ಕಣ್ಣೀರು..!

ಶತ್ರುಘ್ನ ಸಿನ್ಹಾ ಪಕ್ಷ ತೊರೆದಿದ್ದಕ್ಕೆ ‘ಬಿಜೆಪಿ ಭೀಷ್ಮ’ ಕಣ್ಣೀರು..!

ಪಾಟ್ನಾ, ಮೇ. 15, ನ್ಯೂಸ್ ಎಕ್ಸ್ ಪ್ರೆಸ್ಬಿಜೆಪಿ ತೊರೆದು ಕಾಂಗ್ರೆಸ್‍ ಸೇರಿರೋ ನಟ, ರಾಜಕಾರಣಿ, ಶತ್ರುಘ್ನ ಸಿನ್ಹಾ ಇವತ್ತು ಬಿಜೆಪಿ ಭೀಷ್ಮ ಎಲ್‍.ಕೆ.ಅಡ್ವಾಣಿ ಭೇಟಿ ಮಾಡಿ ಆರ್ಶೀವಾದ ಪಡೆದಿದ್ದಾರೆ. ಇದೇ ವೇಳೆ ಮಾತನಾಡಿದ ಸಿನ್ಹಾ,  ಎಲ್‍.ಕೆ.ಅಡ್ವಾಣಿ ಅವರಿಗೆ ಪಕ್ಷ ಬಿಡುವ ನಿರ್ಧಾರ ತಿಳಿಸಿದಾಗ ಕಣ್ಣಾಲಿಗಳು ತುಂಬಿ ಬಂದಿದ್ದವು ಎಂದಿದ್ದಾರೆ.

ಬಿಜೆಪಿ ತೊರೆಯುವುದು ತಮ್ಮ ಜೀವನದ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ. ಸರಿ ದಾರಿಯಲ್ಲಿ ಸಾಗಲು ಅಡ್ವಾಣಿ ಅವರ ಆಶೀರ್ವಾದ ಪಡೆದಿರುವುದಾಗಿ ತಿಳಿಸಿದ್ದಾರೆ. ಅವರು ಪಕ್ಷ ಬಿಡಬೇಡ ಎಂದು ಹೇಳಲಿಲ್ಲವಾದರೂ, ಅವರು ನನ್ನ ಮುಂದೆ ಕಣ್ಣೀರು ಹಾಕಿದ್ದರು ಎಂದು ಶತ್ರುಘ್ನ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos