ಹೊಸಕೋಟೆ, ನ. 21: ಬೆಂಗಳೂರ ಗ್ರಾಮಾಂತರದಲ್ಲಿ ದಿನದಿಂದ ದಿನಕ್ಕೆ ಮತಬೇಟೆ ಬಲು ಜೋರಾಗಿದೆ. ಹೊಸಕೋಟೆ ಹಳೇ ಜಮಾನಕ್ಕೂ ಈಗಿನ ಕಾಲಕ್ಕೂ ಸಾಕಷ್ಟು ಅಜಗಜಾಂತರ ವ್ಯತ್ಯಾಸವಿದೆ. ಅದರಲ್ಲೂ ಚುನಾವಣೆ ವಿಷಯ ಬಂದರೆ ಕ್ಷೇತ್ರ ಕಾದಕೆಂಡದಂತೆ ಪ್ರಜ್ವಲಿಸುತ್ತದೆ.
ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕು ಸಾಕಷ್ಟು ಹೆಸರು ಮಾಡಿದ ಕ್ಷೇತ್ರ. ಅದರಲ್ಲು ಈ ಹಿಂದೆ ರೌಡಿಸಂನಲ್ಲೂ ಸಾಕಷ್ಟು ಸದ್ದು ಮಾಡಿದೆ. ಚಾಕು, ದೊಣ್ಣೆಗಳೇ ಇಲ್ಲಿನ ಪ್ರಮುಖ ಆಯುದಗಳಾಗಿದ್ದವು. ಚುನಾವಣೆ ಬಂತೆಂದರೆ ಸಾಕು ಅಭ್ಯರ್ಥಿಗಳ ನಡುವೆ ವೈಮನಸ್ಸು ಕಾಮನ್. ಮತದಾರರ ಬಳಿ ಮತಕೇಳಲು ಹೋದಾಗ ಹೆದರಿಸಿ, ಬೆದರಿಸಿ, ದೊಣ್ಣೆ, ಚಾಕು ತೋರಿಸಿ ಓಟು ಗಿಟ್ಟಿಸಿಕೊಳ್ಳುವ ಕಾಲವಿತ್ತು. ಆದರೆ ಕಲಿಯುಗದಲ್ಲಿ ಇದೆಲ್ಲವು ಮಾಯವಾಗಿದೆ.
ಹೊಸಕೋಟೆಯ ತಾವರೆಕೆರೆ ಭಾಗದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತಾನಾಡಿದ ಎಂಟಿಬಿ, ಒಂದು ದಶಕದ ಹಿಂದೆ ಹೊಸಕೋಟೆಯ ಬೆನ್ನಿಗಾನಹಳ್ಳಿ ಸುತ್ತಮುತ್ತ 40 ಹಳ್ಳಿಗಳಿಗೆ ಯಾರು ಹೋಗುವಂತಿರಲಿಲ್ಲ. ಆದರೆ 2004ರಲ್ಲಿ ನಾನು ಇಲ್ಲಿಗೆ ಕಾಲಿಟ್ಟಿದ್ದೇ ತಡಾ ಜನರು ನಿರ್ಭೀತಿಯಿಂದ ಇದ್ದಾರೆ. ದೊಣ್ಣೆ, ಕತ್ತಿ, ಚಾಕು ಹೆದರಿಸಿ ಬೆದರಿಸುವ ಕಾಲ ಹೋಗಿ ಈಗೇನಿದ್ದರು ಮತದಾರರಿಗೆ ನಯದಿಂದಲೇ ಓಟು ಗಿಟ್ಟಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ ಎಂದು ಬಚ್ಚೇಗೌಡರ ಕುಟುಂಬ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಸಿದ್ದರಾಮಯ್ಯರಿಗೆ ನಾನು ನೀಡಿರುವ ನೆರವಿನ ಬಗ್ಗೆ ದಾಖಲೆ ಸಮೇತ ನೀಡುತ್ತೇನೆ. ಆದರೆ ಸಿದ್ದರಾಮಯ್ಯ ನನಗೆ ನೆರವು ನೀಡಿಯೇ ಇಲ್ಲ ಎನ್ನುತ್ತಿದ್ಧಾರೆ ಆ ದೇವರೇ ನೋಡಿಕೊಳ್ಳಲ್ಲಿ. ಸಿದ್ದರಾಮಯ್ಯನವರನ್ನು ಕೇಳಲು ಯಾರಿಗೂ ದಮ್ಮಿಲ್ಲ, ಆದರೆ ನನ್ನ ಬಂದು ಕೇಳುತ್ತಾರೆ. ನಾನು 25 ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಹಣ ಸಂಪಾದಿಸಿ ಆಸ್ತಿ ಮಾಡಿದ್ದೇನೆ. ಯಾರು ಏನು ಮಾಡಲಾಗಲ್ಲ. ಸರ್ಕಾರಕ್ಕೆ ಕಟ್ಟಬೇಕಾಗಿರುವುದೆಲ್ಲವನ್ನು ಕಟ್ಟಿದ್ದೇನೆ. ಬೇಕಾದರೆ ಇಡಿ, ಐಟಿ ನೋಡಿಕೊಳ್ಳಲಿ ನನ್ನಿಂದ ನೆರವು ಪಡೆದ ಕಾಂಗ್ರೆಸ್ ನಾಯಕರ ಮಾಹಿತಿ ನೀಡುತ್ತೆನೆಂದು ಎಂಟಿಬಿ ನಾಗರಾಜ್ ಗುಡುಗಿದರು.
ಈ ಭಾರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ನನ್ನನ್ನು ಸೋಲಿಸಲು ಆಗಲ್ಲ. ಆತನೇ ಸೋತು ಸುಣ್ಣ ಆಗಿದ್ದಾನೆ. 36 ಸಾವಿರ ಓಟುಗಳ ಅಂತರದಿಂದ ಯಾಕೆ ಸೋತ. ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಲ್ಲಿ 1800 ಓಟು ಪಡೆದ ಗೆದ್ದ. ಪರಾಜಿತ ಅಭ್ಯರ್ಥಿ 500 ಓಟು ಪಡೆದಿದ್ದರೆ ಸಿದ್ದರಾಮಯ್ಯ ಸೋತು ಮನೆಗೆ ಹೋಗುತ್ತಿದ್ದ ಎಂದು ಸಿದ್ದು ವಿರುದ್ಧ ಎಂಟಿಬಿ ಗರಂ ಆದರು.