ಬೆಂಗಳೂರು, ಮೇ. 17, ನ್ಯೂಸ್ ಎಕ್ಸ್ ಪ್ರೆಸ್ : ‘ಗೋಡ್ಸೆ ದೇಶಭಕ್ತ’ ಎಂಬ ಸಾಧ್ವಿ ಪ್ರಜ್ಞಾ ಸಿಂಗ್ ಹೇಳಿಕೆಗೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟ್ವಿಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಟ್ವೀಟ್ ಮಾಡಿರುವ ಅವರು, ”ಸಂಘ ಪರಿವಾರ ಸಿದ್ದಾಂತಗಳಿಂದ ಗೋಡ್ಸೆ ಸ್ಪೂರ್ತಿ ಪಡೆದಿದ್ದಾರೆ. ಸಾಧ್ವಿ ಪ್ರಜ್ಞಾ ಸಿಂಗ್ ಕೂಡ ಹಾಗೆಯೇ. ಗೋಡ್ಸೆ ಗಾಂಧಿಯನ್ನು ಕೊಂದ. ಇವರು ಅವರ ಮಕ್ಕಳನ್ನು ಕೊಂದರು. ಗೋಡ್ಸೆಯನ್ನು ದೇಶಭಕ್ತ ಎನ್ನುವ ಸಾಧ್ವಿ ನರೇಂದ್ರ ಮೋದಿಯಿಂದ ಅನುಮೋದನೆ ಪಡೆದುಕೊಂಡಿದ್ದಾರೆ. ಇದು ಸಂಘ ಪರಿವಾರದ ದ್ವೇಷ ಸಿದ್ದಾಂತವನ್ನು ವಿಸ್ತರಿಸುವ ಸೂಚನೆಯೇ” ? ಎಂದು ಪ್ರಶ್ನಿಸಿದ್ದಾರೆ. ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾಸಿಂಗ್ ಪ್ರಚಾರದ ವೇಳೆ ನಾಥೂರಾಮ್ ಗೋಡ್ಸೆ ದೇಶಭಕ್ತ. ಜನರ ಮನಸ್ಸಿನಲ್ಲಿ ದೇಶಭಕ್ತನಾಗಿಯೇ ಉಳಿಯಲಿದ್ದಾರೆ ಎಂದು ಹೇಳಿಕೆ ನೀಡಿದ್ದರು.