ಸಿದ್ದರಾಮಯ್ಯ `ತಿಲಕ’ ಹೇಳಿಕೆ: ಪ್ರಹ್ಲಾದ್ ಜೋಶಿ ಟಾಂಗ್

ಸಿದ್ದರಾಮಯ್ಯ `ತಿಲಕ’ ಹೇಳಿಕೆ: ಪ್ರಹ್ಲಾದ್ ಜೋಶಿ ಟಾಂಗ್

ಧಾರವಾಡ, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಸಿದ್ದರಾಮಯ್ಯ ಅವರಿಗೆ ತಿಲಕ ನೋಡಿದ್ರೆ ಭಯ ಆಗುತ್ತಂತೆ. ಯಾಕೆಂದ್ರೆ ತಿಲಕದವರು ದೇಶಪ್ರೇಮಿಗಳು, ಭಯೋತ್ಪಾದನೆ ನಡೆಸುವವರನ್ನು ನೋಡಿದ್ರೆ ಸಿದ್ದರಾಮಯ್ಯ ಅವರಿಗೆ ಬಹಳ ಪ್ರೀತಿ ಎಂದು ಸಂಸದ ಪ್ರಹ್ಲಾದ್ ಜೋಶಿ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಲಕ ಹೇಳಿಕೆಯಿಂದ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಗೊತ್ತಾಗುತ್ತದೆ. ತಿಲಕ ಹಚ್ಚಿದವರನ್ನು ನೋಡಿದ್ರೆ ಅಷ್ಟೇನಾ? ಬೇರೆದವರನ್ನು ನೋಡಿದ್ರೆ ಭಯ ಆಗಲ್ಲವಾ ಎಂದು ಲೇವಡಿ ಮಾಡಿದ್ದಾರೆ.

ಸಿದ್ದರಾಮಯ್ಯ ಅವರು ಜವಾಬ್ದಾರಿಯಿಂದ ಮಾತನಾಡಲಿ, ಸೋಷಿಯಲ್ ಮೀಡಿಯಾದಲ್ಲಿ ಅವರ ವಿರುದ್ಧ ಅಭಿಯಾನ ಚಾಲೂ ಮಾಡಿದ್ದಾರೆ. ಜನ ಅವರಿಗೆ ಉತ್ತರ ನೀಡುತ್ತಿದ್ದಾರೆ. ಈ ಅಭಿಯಾನವನ್ನು ಬಿಜೆಪಿಯವರು ಮಾಡಿಲ್ಲ. ಜನರೇ ಆರಂಭಿಸಿದ್ದಾರೆ ಎಂದು ತಿಲಕ ಅಭಿಯಾನದ ಬಗ್ಗೆ ಸೃಷ್ಠೀಕರಣ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos