ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ

ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು, ಡಿ 21: ಮಂಗಳೂರಿನಲ್ಲಿ ನಡೆಯುತ್ತಿರುವ ಗಲಾಟೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ದಕ್ಷ ಆಡಳಿತ ಇಲ್ಲವಾದ್ರೆ ಹೀಗೇ ಆಗುವುದು. ಸರ್ಕಾರ ಸಂಪೂರ್ಣ ಫೆಲ್ಯೂರ್ ಆಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ದ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ದೇಶದಲ್ಲಿ ಹಲವು ಬರ್ನಿಂಗ್ ವಿಷಯಗಳಿವೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡ್ತಿಲ್ಲ. ಸಮಸ್ಯೆಗಳನ್ನ ಪರಿಹರಿಸುವ ಕೆಲಸ ಮಾಡ್ತಿಲ್ಲ. ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಮೋದಿ, ಶಾ ಕಾರಣ. ಅವರಿಬ್ಬರೇ ನೇರ ಹೊಣೆ ಹೊರಬೇಕು. ಯುಪಿಯಲ್ಲಿ 11 ಜನ ಪ್ರಾಣತೆತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಅಮಾಯಕರ ಬಲಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಇವರು ಹೋರಾಡಿದವರಲ್ಲ ಎಂದು ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಸಿದ್ದು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದಲ್ಲಿ ಹೋಂಮಿನಿಸ್ಟರ್ ಇದ್ದಾರೋ ಇಲ್ವೋ ಗೊತ್ತಿಲ್ಲ. ಪೊಲೀಸರೇ ಗೋಲಿಬಾರ್ ಮಾಡ್ತಾರೆ. ಮತ್ತೆ ಗೃಹ ಸಚಿವರು ಇರೋದು ಯಾಕೆ..? ಸದನದಲ್ಲಿ ಉತ್ತರ ಕೊಡೋದು ಪೊಲೀಸರಾ..? ಗೃಹ ಸಚಿವರೇ ಸದನದಲ್ಲಿ ಉತ್ತರ ಕೊಡಬೇಕು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯೇ ನಡೆಯಬೇಕು. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದ ಸಮಿತಿಯೇ ಆಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

144 ಸೆಕ್ಷನ್ ಹಾಕಬೇಕಾದ ಅವಶ್ಯಕತೆಯಿರಲಿಲ್ಲ. ತುಮಕೂರಿನಲ್ಲಿ ಏನಾದ್ರೂ ಗಲಾಟೆಯಾಗ್ತಿದೆಯೇ..?ಅಲ್ಲೇಕೆ 144 ಸೆಕ್ಷನ್ ಹಾಕಿದ್ದಾರೆ. ಕೊಪ್ಪಳ, ಬೀದರ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ಯಾ..? ಅಲ್ಲೂ 144 ಸೆಕ್ಷನ್ ಜಾರಿ ಅಂದ್ರೆ ನಾಚಿಕೆಯಾಗಲ್ವೇ..? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos