ಸಿದ್ದಗಂಗಾ ಶ್ರೀಗಳ ಗದ್ದುಗೆ ಆಧ್ಯಾತ್ಮ ಕೇಂದ್ರ

ಸಿದ್ದಗಂಗಾ ಶ್ರೀಗಳ ಗದ್ದುಗೆ ಆಧ್ಯಾತ್ಮ ಕೇಂದ್ರ

ತುಮಕೂರು, ಆ. 19 : ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಈಗ ಆಧ್ಯಾತ್ಮ ಕೇಂದ್ರವಾಗಿ ಬದಲಾವಣೆ ಯಾಗುತ್ತಿದೆ. ಶಿವೈಕ್ಯರಾದ ಗದ್ದುಗೆಯ ನೆಲಮಾಳಿಗೆ ಈಗ ಧ್ಯಾನ ಮಂದಿರವಾಗಿ ಬದಲಾಗಿದೆ. ದಿನಂಪ್ರತಿ ಸಾವಿರಾರು ಭಕ್ತಾದಿಗಳು ಬಂದು ಧ್ಯಾನಾಸಕ್ತರಾಗಿ ಧ್ಯಾನದಲ್ಲಿ ಶಿವಕುಮಾರ ಶ್ರೀಗಳನ್ನು ಕಂಡು ಪುನೀತರಾಗುತ್ತಿದ್ದಾರೆ. ಬಳಿ ಓಂಕಾರ ಮೊಳಗುತ್ತಿದೆ. ಭಕ್ತಾದಿಗಳ ಮನಸ್ಸು, ಭಾವ, ಬುದ್ಧಿ ಎಲ್ಲವರೂ ಪ್ರಫುಲ್ಲವಾಗುತ್ತಿದೆ. ಶ್ರೀಗಳು ಶಿವೈಕ್ಯರಾದ ಸ್ಥಳದಲ್ಲಿ ಧ್ಯಾನ ಮಂದಿರ ನಿರ್ಮಾಣ. ಪ್ರಶಾಂತ ವಾತಾವರಣ, ಮಂದ ಬೆಳಕು, ಎದುರಿಗೆ ಶಿವಕುಮಾರ ಶ್ರೀಗಳ ಪುತ್ಥಳಿ ಇದೆ. ಇನ್ನೊಂದೆಡೆಯಿಂದ ಓಂಕಾರ ನಾದ ಕೇಳಿ ಬರುತ್ತಿರುತ್ತದೆ. ಇಲ್ಲಿ ಭಕ್ತಾದಿಗಳು ಕುಳಿತು ಧ್ಯಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
20 x 10 ವಿಸ್ತೀರ್ಣದಲ್ಲಿರುವ ಧ್ಯಾನ ಮಂದಿರದಲ್ಲಿ ಒಮ್ಮೆ 5-10 ಜನರಿಗೆ ಮಾತ್ರ ಧ್ಯಾನ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಕೇವಲ 5-10 ನಿಮಿಷ ಮಾತ್ರ ಧ್ಯಾನಕ್ಕೆ ಅವಕಾಶ ಇದೆ. ಬಳಿಕ ಮುಂದಿನ ಭಕ್ತಾದಿಗಳಿಗೆ ಅವಕಾಶ ಮಾಡಿಕೊಡಬೇಕು. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಧ್ಯಾನ ಮಂದಿರ ತೆರೆದಿರುತ್ತದೆ. ಮೊದಲು ಶ್ರೀಗಳ ಗದ್ದುಗೆ ದರ್ಶನ ಮಾಡಿದ ಬಳಿಕ ಧ್ಯಾನಕ್ಕೆ ಅವಕಾಶ. ಶಿವಕುಮಾರ ಶ್ರೀಗಳನ್ನು ಕಂಡು ಪಾವನರಾಗುತ್ತಿದ್ದಾರೆ ಎಂದು ಭಕ್ತೆ ದಿವ್ಯ ಭಾರತಿ ಹೇಳುತ್ತಾರೆ

ಫ್ರೆಶ್ ನ್ಯೂಸ್

Latest Posts

Featured Videos