ಶ್ರೀ ಲಂಕಾದ ಜೂನಿಯರ್ ಮಲಿಂಗಾ ಎಂಟ್ರಿ!

ಕೊಲಂಬೋ, ಸೆ. 27 : ಕ್ರಿಕೆಟ್ ಜಗತ್ತಿನಲ್ಲಿ ಒಬ್ಬರಂತೆ ಬೌಲಿಂಗ್ ಮತ್ತು ಬ್ಯಾಟಿಂಗ್ ಶೈಲಿ ಹೊಂದಿರುವುದು ತುಂಬಾ ಕಡಿಮೆ. ಇಲ್ಲೊಬ್ಬ ಯುವ ವೇಗಿ ಥೇಟ್ ಶ್ರೀಲಂಕಾ ತಂಡದ ಲಸಿತ್ ಮಲಿಂಗಾ ಮಾದರಿ ಬೌಲಿಂಗ್ ಮಾಡುವುದು ಅಲ್ಲದೆ. ಬ್ಯಾಕ್ ಟು ಬ್ಯಾಕ್ ವಿಕೆಟ್ ಗಳನ್ನು ಪಡೆದು ಅಚ್ಚರಿ ಮೂಡಿಸಿದ್ದಾನೆ. ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬೌಲರ್ಗಳ ಪೈಕಿ ಶ್ರೀಲಂಕಾ ತಂಡದ ಲಸಿತ್ ಮಲಿಂಗಾ ಕೂಡ ಒಬ್ಬರು. ತನ್ನ ವಿಶಿಷ್ಠ ಬೌಲಿಂಗ್ ಶೈಲಿಯ ಮೂಲಕವೇ ಎದುರಾಳಿಗರಿಗೆ ಸಿಂಹಸ್ವಪ್ನ ಕಾಡಿದ ಮಾಲಿಂಗಾ ಕ್ರಿಕೆಟ್ ಇತಿಹಾಸದಲ್ಲಿ ತನ್ನದೇ ಆದ ದಾಖಲೆ ಬರೆದಿದ್ದಾರೆ.
ಶ್ರೀಲಂಕಾದಲ್ಲೇ ಮತ್ತೊಬ್ಬ ಮಲಿಂಗಾ ಬೆಳಕಿಗೆ ಬಂದಿದ್ದಾನೆ. ಮತೀಶ್ ಪಂದ್ಯವೊಂದರಲ್ಲಿ ಕೇವಲ 7 ರನ್ ಗೆ 6 ವಿಕೆಟ್ ಪಡೆದು ಮಿಂಚಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜುನಿಯರ್ ಮಲಿಂಗಾ ಅಂತ ಫೇಮಸ್ ಆಗಿರುವ ಮತೀಶ್ ಇದೀಗ ಲಂಕಾ ಅಂಡರ್-19 ತಂಡದ ದೇಶೀಯ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos