ಗುಲಾಬಿ ಬಣ‍್ಣದ ತುಟಿ ನಿಮ್ಮದಾಗಬೇಕೆ

ಗುಲಾಬಿ ಬಣ‍್ಣದ ತುಟಿ ನಿಮ್ಮದಾಗಬೇಕೆ

ಬೆಂಗಳೂರು. ಜ. 27: ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ ಮತ್ತು ನಮ್ಮ ಸುತ್ತಮುತ್ತಲಿನ ಕಲುಷಿತ ವಾತಾವರಣದಿಂದ ನಮ್ಮ ದೇಹದ ಮೇಲೆ ಹಲವಾರು ರೀತಿಯ ಪ್ರಣಾಮಗಳು ಬೀರುತ್ತಿದ್ದು, ನಮ್ಮ ತುಟಿಗಳ ಬಣ್ಣವನ್ನು ಕಳೆದುಕೊಳ್ಳುತ್ತೇವೆ, ಇದರಿಂದ ಮುಖದ ಅಂದ ಹಾಳಾಗುತ್ತಿದೆ. ಗುಲಾಬಿ ತುಟಿಗಳು ನಿಮ್ಮದಾಗಬೇಕೆಂದರೆ ಕೆಲವೊಂದು ಮನೆಮದ್ದುಗಳು ಉಪಯೋಗಿಸಿ ಇದಕ್ಕೆ ಪರಿಹಾರ ಕಂಡುಕೊ‍ಳ‍್ಳಬಹುದು.

ಹೌದು, ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೆ ಗುಲಾಬಿ ಹೂವಿನ ಬಣ್ಣದ ತುಟಿ ಇರಬೇಕು ಎಂಬ ಆಸೆ ಇರುತ್ತದೆ. ಕಲವರಿಗೆ ಚಳಿಗಾಲ ಬಂತೆಂದರೆ ತುಟಿ ಒಡೆಯುವುದು, ತುಟಿಯ ಅಂದಗೆಡುವುದು ಹೀಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತವೆ.

ಸೂರ್ಯನ ಬೆಳಕಿಗೆ ಜಾಸ್ತಿ ಮುಖವನ್ನು ಒಡ್ಡುವುದರಿಂದ ತುಟಿಯು ಕಪ್ಪಾಗುತ್ತದೆ. ಕೆಲವೊಮ್ಮೆ ಅಲರ್ಜಿಯ ಪರಿಣಾಮದಿಂದ ತುಟಿಯು ತನ್ನ ರಂಗನ್ನು ಕಳೆದುಕೊಳ್ಳುತ್ತದೆ. ಕಡಿಮೆ ಗುಣಮಟ್ಟದ ಉತ್ಪನ್ನಗಳನ್ನು ತುಟಿಗೆ ಬಳಸುವುದರಿಂದ, ಜಾಸ್ತಿ ಕೆಫಿನ್ ಅಂಶದ ವಸ್ತುಗಳ ಸೇವನೆ, ಹಾರ್ಮೋನುಗಳ ಬದಲಾವಣೆಯಿಂದ ತುಟಿಯ ರಂಗು ಮಾಸುತ್ತದೆ. ದುಬಾರಿ ಬೆಲೆ ತೆತ್ತು ಉತ್ಪನ್ನಗಳನ್ನು ಬಳಸಿ ತುಟಿಯ ಆರೋಗ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ನೈಸರ್ಗಿಕವಾಗಿ ಸಿಗುವ ವಸ್ತು ಬಳಸಿ ತುಟಿಯನ್ನು ಆರೋಗ್ಯಕರವಾಗಿರಿಸಿಕೊಳ್ಳಿ.

* ಜೇನುತುಪ್ಪ ಹಾಗೂ ಸಕ್ಕರೆ ಸ್ಕ್ರಬ್ ನಿಂದ ತುಟಿಗೆ ನಿಧಾನವಾಗಿ ಮಸಾಜ್ ಮಾಡುವುದರಿಂದ ತುಟಿಯ ಮೇಲಿರುವ ಡೆಡ್ ಸ್ಕಿನ್ ಗಳು ನಿವಾರಣೆಯಾಗುತ್ತದೆ. 1 ಟೇಬಲ್ ಸ್ಪೂನ್ ಬ್ರೌನ್ ಶುಗರ್, 1 ಟೇಬಲ್ ಸ್ಪೂನ್ ಜೇನುತುಪ್ಪ ಇವೆರೆಡನ್ನು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನತರ ಕೈ ಬೆರಳಿನ ಸಹಾಯದಿಂದ ನಿಧಾನಕ್ಕೆ ನಿಮ್ಮ ತುಟಿಯ ಮೇಲೆ ಮಸಾಜ್ ಮಾಡಿ. ಇದರಿಂದ ರಕ್ತ ಸಂಚಲನೆ ಚೆನ್ನಾಗಿ ಆಗುತ್ತದೆ, ಹಾಗೇ ತುಟಿಯು ಆರೋಗ್ಯಕರವಾಗಿರುತ್ತದೆ. ಕಂದು ಬಣ್ಣ ನಿಧಾನಕ್ಕೆ ಕಡಿಮೆ ಯಾಗುತ್ತದೆ.

ಒಂದು ಮುಷ್ಟಿ ದಾಳಿಂಬೆಬೀಜಗಳನ್ನು ತೆಗೆದುಕೊಳ್ಳಿ. ಇದನ್ನು ಮಿಕ್ಸಿಯ ಸಹಾಯದಿಂದ ರುಬ್ಬಿಕೊಳ್ಳಿ. ಸ್ವಲ್ಪ ಹಾಲಿನ ಕೆನೆ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ತುಟಿಗೆ ಹಚ್ಚಿ 15 ನಿಮಿಷ ಹಾಗೇ ಬಿಡಿ. ನಂತರ ತೊಳೆದುಕೊಳ್ಳಿ. ಇದರಿಂದ ತುಟಿಯ ರಂಗು ಕೆಂಪಾಗುತ್ತದೆ.

ಸತತವಾಗಿ ಪ್ರತಿ ದಿನ ರಾತ್ರಿ ಮಲಗುವ ಸಮಯದಲ್ಲಿ ಬೀಟ್ರೂಟ್ ರಸವನ್ನು ನಿಮ್ಮ ತುಟಿಗೆ ಹಚ್ಚುವುದರಿಂದ ನಿಮ್ಮ ತುಟಿ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos