ಬೆಂಗಳೂರು , ಡಿ. 13 : ನಗರದ ಸಾರ್ವಜನಿಕರಿಗೆ ಸರ್ಕಾರ ಶಾಕ್ ನೀಡಿದೆ. ಇನ್ನು ಮುಂದೆ ಹೊಸ ಕಾರು ಖರೀದಿಸಬೇಕಾದರೆ ನಿಲುಗಡೆಯ ಸ್ಥಳ ಇರುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಈಗಾಗಲೇ ಕಾರು ಹೊಂದಿರುವವರು ಎರಡು ವರ್ಷಗಳ ಒಳಗೆ ನಿಲುಗಡೆ ಸ್ಥಳ ಹೊಂದಿಸಿಕೊಳ್ಳಬೇಕು. ಈ ರೀತಿಯ ವಿವಾದಿತ ನಿಯಮ ಜಾರಿಗೆ ತರಲು ಸಾರಿಗೆ ಇಲಾಖೆ ಮುಂದಾಗಿದೆ.
ಸಾರಿಗೆ ಸಚಿವರಾಗಿದ್ದ ಡಿ.ಸಿ.ತಮ್ಮಣ್ಣ 2018ರ ಜೂನ್ ತಿಂಗಳಿನಲ್ಲೇ ಚರ್ಚೆ ಹುಟ್ಟುಹಾಕಿದ್ದರು. ಒಂದಷ್ಟು ದಿನ ಇದು ಚರ್ಚೆಯಾಗದೆ ಶೈತ್ಯಾಗಾರ ಸೇರಿತ್ತು. ಈಗ ಹೊಸ ಸರ್ಕಾರದಲ್ಲಿ ಮತ್ತೆ ಭುಗಿಲೆದ್ದಿದೆ. ಸಾರಿಗೆ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಾಹನ ಪ್ರಿಯರಿಗೆ ಭಾರೀ ಶಾಕ್ ಕಾದಿದೆ.