ಶೀಲ ಶಂಕಿಸಿ ಕೊಲೆ

ಶೀಲ ಶಂಕಿಸಿ ಕೊಲೆ

ಅಥಣಿ, ಮಾ. 16: ಪತ್ನಿಯ ಶೀಲ ಶಂಕಿಸಿ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದ ಪತಿ ಭಾನುವಾರ ತಡರಾತ್ರಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಲಕ್ಷ್ಮಿಬಾಯಿ ಸಿದ್ರಾಯ ಮೋಳೆ (45) ಕೊಲೆಯಾದ ದುರ್ದೈವಿ. ಪತ್ನಿಯ ಶೀಲ ಶಂಕಿಸಿ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದು, ಗಂಡ ಹೆಂಡತಿಯನ್ನು ಅನುಮಾನಿಸಿ ಅವಳಿಗೆ ಎಲ್ಲಿಲ್ಲದ ಹಿಂಸೆಯನ್ನು ಕೊಟ್ಟು ನಿನ್ನೆ ತಡರಾತ್ರಿ ಹೊಡೆದು-ಬಡಿದು, ನಿನಗೆ ಬೇರೆಯವರ ಜೊತೆ ಸಂಬಂಧವಿದೆಯೆಂದು ಹಿಂಸೆ ಕೊಟ್ಟು ಹೆಂಡತಿಗೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಆರೋಪಿ ಸಿದ್ರಾಯ ನಿಂಗಪ್ಪ ಮೋಳೆ ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos