ಮಂಡ್ಯ, ಅ. 1 : ತಾಲೂಕಿನ ಕಬ್ಬನಹಳ್ಳಿ ಹೊರ ವಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ 30 ಗುಂಟೆಯಲ್ಲಿ ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗೆ ಆಹುತಿಯಾಗಿದೆ.
ಗ್ರಾಮದ ಕುಶ ಎಂಬುವರಿಗೆ ಸೇರಿದ ಜಮೀನಿನ ಬಳಿ ಹಾದು ಹೋಗಿದ್ದ ವಿದ್ಯುತ್ ತಂತಿಗಳು ಶಾರ್ಟ್ ಸರ್ಕ್ಯೂಟ್ ಆಗಿ ಬಿದ್ದ ಕಿಡಿಗಳಿಂದ ಕಬ್ಬು ಹೊತ್ತಿಕೊಂಡಿದೆ. ಬೆಂಕಿ ಗಮನಿಸಿದ ಜನತೆ ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಲ್ಲದೆ, ತಾವು ಕೂಡ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.