ದಿಗ್ಗಜರ ದಾಖಲೆಯತ್ತ ರೋಹಿತ್ ಚಿತ್ತ

ದಿಗ್ಗಜರ ದಾಖಲೆಯತ್ತ ರೋಹಿತ್ ಚಿತ್ತ

ನವದೆಹಲಿ, ಡಿ. 19 : ಆಕರ್ಷಕ ಶತಕ ಸಿಡಿಸಿವ ಮೂಲಕ ಒಂದಿಲ್ಲೊಂದು ದಾಖಲೆ ರೋಹಿತ್ ಶರ್ಮಾ ಮುರಿಯುತ್ತಿದ್ದಾರೆ. ವಿಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಶ್ರೀ ಲಂಕಾ ದಿಗ್ಗಜ ಜಯಸೂರ್ಯ ಅವರ ದಾಖಲೆ ಸರಿಗಟ್ಟಿದ್ದಾರೆ.

ವಿಶಾಖಪಟ್ಟಣಂನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಕೇವಲ 138 ಎಸೆತಗಳಲ್ಲಿ 159 ರನ್ ಗಳಿಸಿದ ರೋಹಿತ್ ಶರ್ಮಾ, ತಮ್ಮ ಶತಕಗಳ ಸಂಖ್ಯೆ 28ಕ್ಕೆ ಏರಿಕೆ ಮಾಡಿಕೊಂಡರು. ಲಂಕಾ ಲೆಜೆಂಡ್ ಆಟಗಾರ ಸನತ್ ಜಯಸೂರ್ಯ ಅವರ ದಾಖಲೆಯನ್ನು ರೋಹಿತ್ ಶರ್ಮಾ ಸರಿಗಟ್ಟಿದ್ದಾರೆ.
ಇದು ರೋಹಿತ್ ಶರ್ಮಾ ಅವರ 220 ನೇ ಏಕದಿನ ಪಂದ್ಯವಾಗಿದ್ದು, 28 ನೇ ಶತಕ ತಮ್ಮದಾಗಿಸಿ ಕೊಂಡಿದ್ದಾರೆ. 27 ಶತಕಗಳನ್ನು ಬಾರಿಸಿದ ಹಶಿಮ್ ಆಮ್ಲಾ ಅವರನ್ನು ಹಿಂದಿಕ್ಕಿದ್ದಾರೆ.

ರೋಹಿತ್ ಶರ್ಮಾ ಈಗ ಹೆಚ್ಚು ಶತಕಗಳಿಸಿದ ದಾಖಲೆ ನಿರ್ಮಿಸಿರುವ ಶ್ರೀಲಂಕಾದ ಸನತ್ ಜಯಸೂರ್ಯ (28) ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈಗ ‘ಹಿಟ್ಮ್ಯಾನ್’ ರೋಹಿತ್ ಶರ್ಮಾರ ಮುಂದಿನ ಗುರಿ ರಿಕಿ ಪಾಂಟಿಂಗ್ ಹೆಸರಿನಲ್ಲಿರುವ 30 ನೇ ಅಳಿಸುವುದಾಗಿದೆ.
ಶರ್ಮಾ ಈಗ ಜಂಟಿಯಾಗಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರಿಕಿ ಪಾಂಟಿಂಗ್ ಮಾತ್ರ ಅವರಿಗಿಂತ ಹೆಚ್ಚು ಶತಕಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ 49 ಶತಕಗಳ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ 43 ಶತಕಗಳನ್ನು ಬಾರಿಸಿದ್ದಾರೆ. ರಿಕಿ ಪಾಂಟಿಂಗ್ 30 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos