ಬೆಂಗಳೂರು, ಡಿ. 16: ಸಾಮಾನ್ಯವಾಗಿ ಸಿನಿಮಾ ಕಲಾವಿದರು ತಮ್ಮ ಹೆಸರನ್ನು ಬದಲಿಸಿಕೊಳ್ಳುವುದು ಕಾಮನ್ ಆಗಿ ಬಿಟ್ಟಿದೆ. ಹೌದು, ಕೆಲವರು ಮೂಲ ಹೆಸರನ್ನು ಬದಿಗಿಟ್ಟು ಹೊಸ ಹೆಸರಿನೊಂದಿಗೆ ಗುರುತಿಸಿಕೊಳ್ಳುತ್ತಾರೆ. ಈಗ ನಟಿ ಶಾನ್ವಿ ಶ್ರೀವಾತ್ಸವ್ ಸಹ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ.
ಶಾನ್ವಿ ಶ್ರೀವಾತ್ಸವ್ ಇದೀಗ ‘ಲಕ್ಷ್ಮೀ ಫ್ರಂ ಅಮರಾವತಿ’ ಆಗಿದ್ದಾರೆ. ಈ ಹೆಸರಿನ ಬದಲಾವಣೆಗೆ ನಾರಾಯಣನ ಕೈವಾಡವೂ ಇದೇ ಎಂದರೆ ನೀವು ನಂಬಲೇಬೇಕು. ಹೌದು, ಇದೇ ತಿಂಗಳ 27 ರಂದು ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಬಿಡುಗಡೆಯಾಗುತ್ತಿದೆ.
ಇನ್ನು ಈ ಚಿತ್ರದಲ್ಲಿ ಶಾನ್ವಿ ‘ಲಕ್ಷ್ಮೀ’ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಕಥೆ ಅಮರಾವತಿ ಊರಿನಲ್ಲಿ ನಡೆಯುತ್ತದೆ. ಹೀಗಾಗಿ ಅವರು ತಮ್ಮ ಚಿತ್ರದಲ್ಲಿನ ಪಾತ್ರದ ಹೆಸರನ್ನೇ ‘ಲಕ್ಷ್ಮೀ ಫ್ರಂ ಅಮರಾವತಿ’ ಟ್ವಿಟರ್ ಖಾತೆಯಲ್ಲಿ ಬದಲಿಸಿಕೊಂಡಿದ್ದಾರೆ.