ಶಾಲೆಯಲ್ಲೇ ಪ್ರಿನ್ಸಿಪಾಲ್ ಚಕ್ಕಂದ

ಶಾಲೆಯಲ್ಲೇ ಪ್ರಿನ್ಸಿಪಾಲ್ ಚಕ್ಕಂದ

ಶಿವಮೊಗ್ಗ, ಮಾ.12, ನ್ಯೂಸ್ ಎಕ್ಸ್ ಪ್ರೆಸ್: ನಾವೇಲ್ಲ ಶಾಲೆಯನ್ನು ದೇವಾಲಯ ಎಂದು ಕರೆಯುವುದು ನಮ್ಮ ಸಂಪ್ರದಾಯ, ಹೀಗಿರುವಗ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮಳೂರು ಗ್ರಾಮದಲ್ಲಿ ವಸತಿ ಶಾಲೆ ಇದ್ದು, ಈ ಶಾಲೆಯ ಪ್ರಾಂಶುಪಾಲ ಶಾಲೆಯ ಉದ್ಯೋಗಿಯಾಗಿರುವ ಮಹಿಳೆಯೊಂದಿಗೆ ಚಕ್ಕಂದವಾಡುತ್ತಿದ್ದಾನೆ.

ಇವರಿಬ್ಬರ ಆಟ ಕದ್ದು ಮುಚ್ಚಿ ನಡೆಯುತ್ತಿದ್ದು, ಇದು ಬೇರೆ ಶಿಕ್ಷಕರು ಮತ್ತು ಮಕ್ಕಳಿಗೆ ಗೊತ್ತಾಗಿ, ಗ್ರಾಮಸ್ಥರು ಸೇರಿಕೊಂಡು ಪ್ರಾಂಶುಪಾಲನ ವರ್ತನೆ ಬಗ್ಗೆ ಆಕ್ಷೇಪಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಯಾರು ಯಾರೊಂದಿಗೆ ಬೇಕಾದರೂ ಸಂಬಂಧ ಇಟ್ಟುಕೊಳ್ಳಬಹುದು ಎಂದು ಪ್ರಾಂಶುಪಾಲ ಗ್ರಾಮಸ್ಥರಿಗೆ ಹೇಳಿದ್ದಾನೆ. ಅಲ್ಲದೇ, ತನ್ನ ಆಟವನ್ನು ಮುಂದುವರಿಸಿದ್ದಾನೆ.

ಇತ್ತೀಚೆಗೆ ಅಡುಗೆ ಸಾಮಗ್ರಿಗಳನ್ನು ಇಡಲಾಗಿದ್ದ ಕೊಠಡಿಯಲ್ಲಿ ಮಹಿಳಾ ಉದ್ಯೋಗಿಯೊಂದಿಗೆ ಇದ್ದ ಸಂದರ್ಭದಲ್ಲಿ ಅವರಿಗೆ ಗೊತ್ತಾಗದಂತೆ ಮೊಬೈಲ್ ನಲ್ಲಿ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎಂದು ಹೇಳಲಾಗಿದೆ.

ಸಮಾಜ ಕಲ್ಯಾಣ ಇಲಾಖೆ ಅಕಾರಿಗಳಿಗೆ ವಸತಿ ಶಾಲೆ ಪ್ರಾಂಶುಪಾಲನ ಈ ವಿಷಯ ತಿಳಿಸಿದ್ದರೂ, ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಮತ್ತು ಗ್ರಾಮಸ್ಥರು ದೂರಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos