ಸೆಲ್ಪಿ ವಿಡಿಯೋ : ಹಾವು ಕಚ್ಚಿಸಿಕೊಂಡ ಉರಗ ತಜ್ಞ

ಸೆಲ್ಪಿ ವಿಡಿಯೋ : ಹಾವು ಕಚ್ಚಿಸಿಕೊಂಡ ಉರಗ ತಜ್ಞ

ಧಾರವಾಡ, ಸೆ. 21 : ಸೆಲ್ಪಿ ವಿಡಿಯೋ ಮಾಡುವಾಗ ಹಾವು ಕಚ್ಚಿ ಅಚ್ಚರಿ ಮೂಡಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ನೆಹರೂನಗರ ನಿವಾಸಿ ಉರಗ ತಜ್ಞ ನಾಸಿರ್ . ಗಾಂಧಿನಗರದ ಮನೆಯಲ್ಲಿ ನಾಗರ ಹಾವನ್ನು ಹಿಡಿದಿದ್ದು, ರಕ್ಷಣೆ ಮಾಡಿ ಅರಣ್ಯದಲ್ಲಿ ಸೆಲ್ಫಿ ವಿಡಿಯೊ ಮಾಡುವಾಗ, ಉರಗ ತಜ್ಞರನ್ನು ಹಾವು ಕಚ್ಚಿದೆ.
ನಾಸಿರ್ ಆಸ್ಪತ್ರೆ ಸೇರಿ ಜೀವನ ಮರಣದ ಮಧ್ಯೆ ಹೋರಾಟ ಮಾಡಿ ಈಗ ಬದುಕಿ ಬಂದಿದ್ದಾನೆ. ಸದ್ಯ ಅವನು ಆಸ್ಪತ್ರೆಯಿಂದ ಬಂದ ಮೇಲೆ   ಹಾವು ಹಿಡಿಯುವುದು ಎಷ್ಟು ಕಷ್ಟ ಎಂದು ಮತ್ತೊಂದು ವಿಡಿಯೋ ಮಾಡಿದ್ದಾನೆ. ಉರಗ ತಜ್ಞ ನಾಸಿರ್ ಅವರನ್ನು   ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಎರಡೂವರೆ ಲಕ್ಷ ಖರ್ಚು ಮಾಡಿ ಉಳಿಸಿ ತರಲಾಗಿದೆ. ಈ ಬಗ್ಗೆ ಆತ ತನ್ನ ವಿಡಿಯೋದಲ್ಲಿ ಹೇಳಿಕೊಂಡಿದ್ದು, ಹಾವು ಬದುಕಿಸಲು ಹೋಗಿ ಆತನೇ ಹಾವಿನ ದವಡೆಗೆ ಸಿಕ್ಕ ಬಗ್ಗೆ ಹೇಳಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos