ಬೆಂಗಳೂರು, ಡಿ. 16: ಒರಿಸ್ಸಾದಿಂದ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಡಗುಲಾಮಿ ಗ್ರಾಮದ ನಿವಾಸಿ ಕಿರದ್ ಮಿಶಾಲ್ ಬಂಧಿತ. ಒರಿಸ್ಸಾದಿಂದ ರೈಲು ಮೂಲಕ ಬೆಂಗಳೂರಿಗೆ ಅಪಾರ ಪ್ರಮಾಣದಲ್ಲಿ ಗಾಂಜಾವನ್ನು ಲಗ್ಗೇಜ್ ಬ್ಯಾಗ್ನಲ್ಲಿ ತಂದು ಮಾರಾಟ ಮಾಡುತ್ತಿದ್ದ.
ನಗರದ ಐಟಿ ಟೆಕ್ಪಾರ್ಕ್, ಕಾಲೇಜು, ಪಿಜಿ ಇರುವ ಜನದಟ್ಟಣೆ ಪ್ರದೇಶಗಳಲ್ಲಿ ಸ್ಥಳೀಯ ಗಾಂಜಾ ಪೆಡ್ಲರ್ಗಳಿಗೆ ನಿರಂತರ ಗಾಂಜಾವನ್ನು ಮಾರಾಟ ಮಾಡುತ್ತಿದ್ದು ಬೆಳಕಿಗೆ ಬಂದಿದೆ.
ಆರೋಪಿಯೊಬ್ಬನನ್ನು ಬಂಧಿಸಿರುವ ಮಾರತ್ ಹಳ್ಳಿ ಪೊಲೀಸರು ಆತನಿಂದ 5 ಲಕ್ಷ ರೂ. ಮೌಲ್ಯದ 15 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.