ಶಾಲೆಯಿಂದ ಶಾಲೆಗೆ ಕನ್ನಡ ಕಾರ್ಯಕ್ರಮಗಳ ಅಭಿಯಾನ

ಶಾಲೆಯಿಂದ ಶಾಲೆಗೆ ಕನ್ನಡ ಕಾರ್ಯಕ್ರಮಗಳ ಅಭಿಯಾನ

ಕೆ.ಆರ್. ಪುರ , ಸೆ. 1:  ಶಾಲಾ ಮಕ್ಕಳಲ್ಲಿ ಕನ್ನಡ ನಾಡಿನ ಹೆಮ್ಮೆಯ ಕವಿಗಳ ಪರಿಚಯ ಹಾಗೂ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ ಇವುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ‌ ಶಾಲೆಯಿಂದ ಶಾಲೆಗೆ ಕನ್ನಡ ಕಾರ್ಯಕ್ರಮ  ಎಂಬ ಅಭಿಯಾನವನ್ನು ಪ್ರಾರಂಭಿಸಲಾಗಿದೆ ಎಂದು ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ವೆ.ಅಜಿತ್ ಕುಮಾರ್ ತಿಳಿಸಿದರು. ‌

ಮಹದೇವಪುರ ಕ್ಷೇತ್ರದ ಬಿದರಹಳ್ಳಿ ಹೋಬಳಿಯ ದೊಡ್ಡಗುಬ್ಬಿ ಪಂಚಾಯತಿಯ ಶ್ರೀವೀರಭದ್ರ ಪ್ರೌಢ ಶಾಲೆಯ ವಿದ್ಯಾರ್ಥಿಗಳೊಂದಿಗೆ ದೊಡ್ಡಗುಬ್ಬಿ ಕಸಾಪ ಘಟಕದವತಿಯಿಂದ  ಆಯೋಜಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ‌ಗ್ರಾಮೀಣ ಭಾಗದ ಪ್ರತಿಯೊಂದು ಶಾಲೆಯ ಮಕ್ಕಳಲ್ಲಿ ಹಾಗೂ ಜನರಲ್ಲಿ  ಸಾಹಿತ್ಯಪರ ಚಟುವಟಿಕೆಗಳನ್ನು, ಸಾಹಿತ್ಯ ಲೋಕದ ಹೆಮ್ಮೆಯ ಕವಿಗಳ ಬಗ್ಗೆ ಅಧ್ಯಯನ ಮಾಡಿ ಸಾಹಿತ್ಯದ ಅಭಿರುಚಿ ಬೆಳಸಿಕೊಂಡು ವಿದ್ಯಾರ್ಥಿಗಳು ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲ್ಲಿ, ಕನ್ನಡ ಉಳಿಸುವ ಕೆಲಸಕ್ಕೆ ಮುಂದಾಗಲ್ಲಿ ಎಂಬ ಉದ್ದೇಶದಿಂದ ಕಾರ್ಯಕ್ರಮಕ್ಕೆ ಚಾಲನೆನೀಡಿದ್ದೆನೆ ಎಂದರು.

ಕಾರ್ಯಕ್ರಮದ ನಿರ್ವಹಣೆಯನ್ನು ಎಂ.ಆರ್.ಉಪೇಂದ್ರ ಕುಮಾರ್, ಕಿರಣ್, ನಿರ್ವಹಿಸಿದರೆ ನಿರೂಪಣೆಯನ್ನು ಕೋಶಾಧ್ಯಕ್ಷ ಎಸ್.ಎಂ. ಶಿವರಾಮ್ ನಿರ್ವಹಿಸಿದರು, ನಾದಲೀಲೆ ಜಿ.ನಾಗರಾಜ್ ಅವರಿಂದ ಉಪನ್ಯಾಸವನ್ನು ಸಹ ನೀಡಲಾಯಿತು. ಇದೇ ವೇಳೆ ಕಾರ್ಯಕ್ರಮದಲ್ಲಿ ಕಸಾಪ ಬಿದರಹಳ್ಳಿ ಹೋಬಳಿ ಅಧ್ಯಕ್ಷ ನಾಗೇಶ್, ದೊಡ್ಡ ಗುಬ್ಬಿ ಪಂಚಾಯತಿ ಅಧ್ಯಕ್ಷ ಡಿ.ಎಂ. ಮನೋಹರ್, ಸಮಾಜಸೇವಕ ಸುರೇಂದ್ರ, ಕೆ.ಪಿ. ನಾಗೇಶ್, ಶೋಭರಮೇಶ್, ಹೆಚ್.ಎನ್.ವೇಣು, ರಮೇಶ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮುಂತಾದವರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos