ಎಸ್.ಬಿ.ಐ ಬ್ಯಾಂಕ್‌ವಿರುದ್ಧ ಗ್ರಾಹಕರ ಧರಣಿ

ಎಸ್.ಬಿ.ಐ ಬ್ಯಾಂಕ್‌ವಿರುದ್ಧ ಗ್ರಾಹಕರ ಧರಣಿ

ಕೊಡಿಗೇನಹಳ್ಳಿ: ಗಡಿ ಗ್ರಾಮದಲ್ಲಿರುವ ಬ್ಯಾಂಕ್‌ನಲ್ಲಿ ಪಾಸ್ ಬುಕ್ ಎಂಟ್ರೀ ಮಾಡಲು ಸತಾಯಿಸುತ್ತಿದ್ದಾರೆ, ರೈತರಿಗೆ ಸರಕಾರಿ ಯೋಜನೆಗಳು ಸಮರ್ಪಕವಾಗಿ ದಕ್ಕುತ್ತಿಲ್ಲಾ ಎಂದು ಆರೋಪಿಸಿ ರೈತರು ಹಾಗೂ ಗ್ರಾಹಕರು ಧರಣಿ ಹಮ್ಮಿಕೊಂಡಿದ್ದರು.

ಹೋಬಳಿ ಕಡಗತ್ತೂರು ಗ್ರಾಮದಲ್ಲಿರುವ ಎಸ್.ಬಿ.ಐ ಶಾಖೆಯ ಸಿಬ್ಬಂದಿ ವಿರುದ್ಧ ರೈತರು ಹಾಗೂ ಬ್ಯಾಂಕ್ ಗ್ರಾಹಕರು ಧರಣಿಯಲ್ಲಿ ಇಲ್ಲಿನ ಬ್ಯಾಂಕ್ ಮ್ಯಾನೇಜರ್ ಅವರಿಗೆ ಹಳೆ ಬಟ್ಟೆ ಹಾಕಿರುವ ಗ್ರಾಹಕರು ಬಂದರೆ ಕಿಂಚಿತ್ತು ಮರ್ಯಾದೆ ಕೊಡುವುದಿಲ್ಲಾ, ಕಳೆದ ಆರುತಿಂಗಳಿಂದ ಪಾಸ್ ಬುಕ್ ಎಂಟ್ರೀ ಮಾಡಿಕೊಡುತ್ತಿಲ್ಲಾ, ಕೃಷಿ ಸಾಲ, ಗೋಲ್ಡ್ ಲೋನ್ ಕೊಡಲು ಸತಾಯಿಸುತ್ತಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.

ಕನಿಷ್ಠ ಪಿಂಚಣಿ ಬಂದಿಯಾ ಚೆಕ್ ಮಾಡಿ ಎಂಟ್ರಿ ಮಾಡಿ ಕೊಡಿ ಸರ್ವರ್ ಇಲ್ಲಾ, ನೆಟ್ ವರ್ಕ್ ಇಲ್ಲ ಎಂಬ ನೆಪವೊಡ್ಡುತ್ತಿದ್ದಾರೆ, ಗ್ರಾಹಕರಿದ್ದರೆ ಬ್ಯಾಂಕ್, ನಮ್ಮ ತೆರಿಗೆ ಹಣದಲ್ಲಿ ಇಲ್ಲಿನ ಸಿಬ್ಬಂದಿ ಸಂಬಳ ಪಡೆಯುತ್ತಿದ್ದಾರೆ ಎಂಬುದನ್ನು ಮರೆತಿದ್ದಾರೆ. ಸಿಬ್ಬಂದಿ ಕೊರತೆ ಇದೆ ನೀವು ಏನ್ ಬೇಕಾದರೂ ಮಾಡಿಕೊಳ್ಳಿ ಎಂದು ಉಡಾಫೇ ಉತ್ತರ ನೀಡುತ್ತಾರೆ. ಎಂದು ಗ್ರಾಹಕ ಆದಿನಾಯರಣ ಆರೋಪಿದರು.

 

ಫ್ರೆಶ್ ನ್ಯೂಸ್

Latest Posts

Featured Videos