ಸೌದಿ, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ಕಳೆದ 30 ವರ್ಷಗಳಿಂದ ತಾನು ಸೌದಿ ರಾಜಕುಮಾರನೆಂದು ಸೌದಿ ಜನರಿಗೆ ಮೊಸ ಮಾಡುತ್ತಿದ್ದ.ಇದನ್ನು ನಂಬಿದ ಜನರು ಅವನಿಂದ ಮೊಸ ಹೋಗಿದ್ದಾರೆ. ಸೌದಿಯಲ್ಲಿ ರಾಜಕುಮಾರನೆಂದು ತಿರುಗುತ್ತಿದ್ದ ಹಾಗೂ ಜನರನ್ನು ವಂಚಿಸುತ್ತಿದ್ದ ಫ್ಲೋರಿಡಾದ ವ್ಯಕ್ತಿಯೊಬ್ಬನಿಗೆ ನೂರಾರು ಜನರಿಗೆ 8 ಮಿಲಿಯನ್ ಡಾಲರಿಗೂ ಅಧಿಕ ಹಣದ ವಂಚನೆಗೈದಿದ್ದಕ್ಕೆ 18 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಈ ನಕಲಿ ಸೌದಿ ರಾಜಕುಮಾರ ತನ್ನ ಹೆಸರು ಖಾಲಿದ್ ಬಿನ್ ಅಲ್-ಸೌದ್ ಎಂದು ಹೇಳಿಕೊಳ್ಳುತ್ತಿದ್ದ. ಆತ ವಾಸ್ತವವಾಗಿ 48 ವರ್ಷದ ಆಂಟನಿ ಗಿಗ್ನಕ್ ಎಂಬ ಹೆಸರಿನ ವ್ಯಕ್ತಿಯಾಗಿದ್ದ. ಆತ ನಿಜವಾಗಿಯೂ ರಾಜಕುಮಾರನೆಂದು ನಂಬಿದ್ದ ಜನರು ತಮ್ಮ ಹಣವನ್ನು ಆತ ಹೂಡಿಕೆ ಮಾಡುತ್ತಾನೆಂದು ಅಂದುಕೊಂಡು ಆತನ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿದ್ದರೆಂದು ತಿಳಿದು ಬಂದಿದೆ.