ಹೊಸಕೋಟೆ, ನ. 22: ಹೈವೋಲ್ಟೇಜ್ ಕ್ಷೇತ್ರದಲ್ಲಿ ತೀವ್ರ ಕುತೂಹಲ ಸೃಷ್ಠಿಸಿರುವ ಉಪ ಕದನದ ಪ್ರಚಾರದ ಭರಾಟೆ ಜೋರಾಗಿದೆ. ಒಂದು ಕಡೆ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ಸ್ಪರ್ಧಿಸಿದರೆ. ಹಳೆ ಹುಲಿ ಎಂಟಿಬಿ ನಾಗರಾಜು ಬಿಜೆಪಿಯಿಂದ ಅಕಾಡದಲ್ಲಿದ್ದಾರೆ.. ಹೀಗಾಗಿ ಇಬ್ಬರ ನಡುವೆ ಚುನಾವಣಾ ಕಾಳಗ ರೋಚಕವಾಗಿದೆ.
ಹೊಸಕೊಟೆಯಲ್ಲಿ ದಿಗ್ಗಜರ ಚುನಾವಣ ಬಲಾಬಲಾ ರೋಚಕವಾಗಿದೆ. ಶರತ್ ವರ್ಸ್ಸ್ ಎಂಟಿಬಿ ನಡುವೆ ನೇರ ಕಾಳಗ ಶುರುವಾಗಿದೆ. ಇಬ್ಬರು ಒಬ್ಬರಿಗೊಬ್ಬರು ಪೈಪೋಟಿ ಎಂಬಂತೆ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡು ಬ್ಯುಸಿಯಾಗಿದ್ದಾರೆ. ಇಂದು ಸಹಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದರು.
ಹೊಸಕೋಟೆಯ ನಂದಗುಡಿ ಹೋಬಳಿಯ ಎತ್ತಕ್ಕಿ ಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ಸ್ವತಂತ್ರ ಅಭ್ಯರ್ಥಿ ಶರತ್ ಬಚ್ಚೇಗೌಡ ಎಂಟಿಬಿಯನ್ನ ನಾಗರಹಾವಿಗೆ ಹೊಲಿಸಿದರು. ಕಷ್ಟಪಟ್ಟು ಗೆದ್ದಲ ಹುಳು ಹುತ್ತ ಕಟ್ಟುತ್ತೇ, ಆದರೆ ನಾಗರಾಜನ ರೂಪದಲ್ಲಿ ಬಂದು ನಾಗರ ಹಾವು ಹುತ್ತದೊಳಗೆ ಸೇರಿಕೊಂಡು ನಮಗೆ ಜಾಗವಿಲ್ಲದಂತೆ ಮಾಡಿದೆಯೆಂದು ಬುಸ್ ಬುಸ್ ನಾಗರಾಜನಿಗೆ ಶರತ್ ಬುಸ್ ಗುಟ್ಟಿದರು.
ನನ್ನ ತಂದೆ ಬಚ್ಚೇಗೌಡರು ನಮ್ಮ ಪರ ಪ್ರಚಾರಕ್ಕೆ ಬರೋದಿಲ್ಲ. ಅವರು ಬಿಜೆಪಿ ಸಂಸದರಾಗಿದ್ದಾರೆ ಪಾರ್ಲಿಮೆಂಟ್ ಸೆಷನ್ ನಡೆಯುತ್ತಿರೋದ್ರಿಂದ ಅವರು ದೆಹಲಿಯಲ್ಲಿ ಇದ್ದಾರೆ. ಅವರು ಬರುವ ಅವಶ್ಯಕತೆಯೂ ಇಲ್ಲ. ನಾನೇ ಎಲ್ಲವನ್ನು ನೋಡಿಕೊಳ್ಳುತ್ತೇನೆಂದರು. ಎಲ್ಲರ ಮನೆಯಲ್ಲೂ ಬಳಸುವಂತಹ ಕುಕ್ಕರ್ ಚಿನ್ಹೆ ನನಗೆ ಸಿಕ್ಕಿದೆ. ಎಲ್ಲರ ಆಶೀರ್ವಾದ ನಮ್ಮ ಜೊತೆ ಇರುತ್ತದೆ ಎನ್ನುವಂತಹ ನಂಬಿಕೆ ಇದೆ. ತಂದೆ ಅಕಾಡದ ಪ್ರಚಾರಕ್ಕೆ ಏಕೆ ಬರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆ ಶರತ್ ಅದಕ್ಕೆ ತೀಕ್ಷಣ ಉತ್ತರ ನೀಡಿದರು. ಚುನಾವಣೆ ಪ್ರಚಾರದ ವೇಳೆ ಶರತ್ ಕೇವಲ ನಾಯಕನಾಗಿ ಶೂಟು ಭೂಟ ಹಾಕಿಕೋಳ್ಳುವುದಲ್ಲದೆ ಕ್ಯಾಂಪೇನ್ ವೇಳೆ ದೊಳ್ಳು ಬಾರಿಸುವ ಮೂಲಕ ನಾವ್ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಿದ್ದಾರೆ.
ಚುನಾವಣೆ ಅಂದರೆ ಅಷ್ಟೆ. ತಮ್ಮ ಸ್ವಾರ್ಥಕೋಸ್ಕರ ಓಟ್ ಗಿಮಿಕ್ ಗೋಸ್ಕರ ಒಬ್ಬರಿಗೊಬ್ಬರು ಏನು ಬೇಕಾದರು ಬೈದಾಡಿಕೊಳ್ಳಲು ಸಿದ್ದರಿರುತ್ತಾರೆ. ಆದರೆ ಸಾಮಾನ್ಯ ಜನರಿಗೆ ಮಾತ್ರ ಇವರ ಸ್ಟೇಜ್ ಇಲ್ಲದ ಡ್ರಾಮ ಯಾರಿಗೂ ಅರ್ಥವಾಗೋದಿಲ್ಲ. ಆದರೆ ಇವರ ನಿಜವಾದ ನಾಟಕ ಚುನಾವಣೆ ಫಲಿತಾಂಶದಲ್ಲಿ ಎಲ್ಲವೂ ತಿಳಿಯಲಿದೆ.