ಹಾಸನ,ಮಾ.21, ನ್ಯೂಸ್ ಎಕ್ಸ್ ಪ್ರೆಸ್: ಸಾರ್ವಜನಿಕರಲ್ಲಿ ನ್ಯಾಯಾಂಗದ ಮೇಲೆ ನಂಬಿಕೆ ಕಡಿಮೆಯಾಗುತ್ತಿದೆ ಆದರೆ ಇದು ಹೀಗೆ ಮುಂದುವರಿಯುತ್ತಿರುವುದು ವಿಷಾದನೀಯ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಗಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ನ್ಯಾಯಾಂಗ ವ್ಯವಸ್ಥೆ ತೀವ್ರ ಹದಗೆಟ್ಟಿದೆ.
ನ್ಯಾಯಾಲದ ನಾಲ್ಕು ಗೋಡೆಯ ಮಧ್ಯೆ ಇರಬೇಕಾದ ನ್ಯಾಯಾಧೀಶರು ತಮ್ಮ ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ ಇದು ಉತ್ತಮ ಬೆಳವಣಿಗೆಯಲ್ಲ ಎಂದಿಗೂ ಸಹ ಸಂವಿಧಾನದ ಮೂರನೇ ಅಂಗವಾದ ನ್ಯಾಯಾಂಗ ವ್ಯವಸ್ಥೆ ಸಾರ್ವಜನಿಕರಿಗೆ ಸೂಕ್ತ ನ್ಯಾಯಾ ಒದಗಿಸುವ ವೇದಿಕೆಯಾಗಬೇಕು ಎಂದರು.
ಸಮಾಜದಲ್ಲಿ ಉತ್ತಮ ಮೌಲ್ಯ ವೃದ್ಧಿಗೆ ಸಂವಿಧಾನದ ಹಕ್ಕಾದ ಮತದಾನ ಪ್ರತಿಯೂಬ್ಬರು ಮಾಡಲೇಬೇಕು ಯಾವೂಬ್ಬ ವ್ಯಕ್ಕಿ ಹಾಗೂ ಪಕ್ಷಕ್ಕೆ ಸೀಮಿತವಾಗದೆ ಪ್ರಜಾಪ್ರಭುತ್ವ ಕ್ಕೆ ಶಕ್ತಿ ತುಂಬವವರಿಗೆ ಮತ ನೀಡಿ ಎಂದು ಸಲಹೆ ನೀಡಿದರು.
ಜಾತಿ,ಧರ್ಮದ ಹೆಸರಿನಲ್ಲಿ ರಾಜ್ಯಗಳನ್ನು ವಿಭಜಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ರಾಜಕಾರಣಿಗಳು ಸಾರ್ವಜನಿಕರನ್ನು ಇಂದಿಗೂ ವಂಚಿಸುತ್ತಿದ್ದಾರೆ ಆದ್ದರಿಂದ ಯೋಗ್ಯರಿಗೆ ಮತ ಚಲಾಯಿಸಿ ಇಲ್ಲವಾದಲ್ಲಿ ನೋಟ ಒತ್ತುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಲು ಮರೆಯದಿರಿ ಎಂದು ಸಂತೋಷ್ ಹೆಗ್ಗಡೆ ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.