ಬಿಜೆಪಿಯಿಂದಲೇ ಗೋಹತ್ಯೆ… ಎಂದ ಕೇಂದ್ರ ಸಚಿವ ಸಂಪಾಲ!

ಬಿಜೆಪಿಯಿಂದಲೇ ಗೋಹತ್ಯೆ… ಎಂದ ಕೇಂದ್ರ ಸಚಿವ ಸಂಪಾಲ!

ಹೋಶಿಯಾರ್ಪುರ್, ಏ. 24, ನ್ಯೂಸ್ ಎಕ್ಸ್ ಪ್ರೆಸ್:   ಬಿಜೆಪಿ ಈಗ ಗೋಹತ್ಯೆಯ ಪರವಾಗಿದೆ ಅಂತಾ ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ವಿಜಯ ಸಂಪಾಲ ಆರೋಪಿಸಿದ್ದಾರೆ. ಹೊಶೈಪುರ ಬಿಜೆಪಿ ಸಂಸದನಿಗೆ ಮತ್ತೊಂದು ಅವಧಿಗೆ ಪಕ್ಷ ಟಿಕೆಟ್ ನೀಡಿಲ್ಲ. ಇದರಿಂದಾಗಿ ಆಕ್ರೋಶಗೊಂಡಿರುವ ವಿಜಯ ಸಂಪಾಲ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಪಂಜಾಬ್‌ನ ಹೊಶೈಪುರ ಬಿಜೆಪಿ ಸಂಸದ ಸಂಪಾಲ ಈ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಸೃಷ್ಟಿಸಿದ್ದಾರೆ. ಮತ್ತೊಂದು ಅವಧಿಗೆ ಸಂಪಾಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಫಗವಾರ ಬಿಜೆಪಿ ಶಾಸಕ ಸೋಮ ಪ್ರಕಾಶ್‌ಗೆ ಈಗ ಹೊಶೈಪುರ ಕ್ಷೇತ್ರದ ಟಿಕೆಟ್ ಸಿಕ್ಕಿದೆ. ಇದರಿಂದಾಗಿ ಕುಪಿತಗೊಂಡ ಹಾಲಿ ಸಂಸದ ಸಂಪಾಲ, ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೆಪಿ ಟಿಕೆಟ್ ನಿರಾಕರಿಸಿದ್ದಕ್ಕೆ ಸಂಪಾಲ ತಮ್ಮ ಟ್ವಿಟರ್ ಖಾತೆಯಲ್ಲಿದ್ದ ಚೌಕಿದಾರ್‌ ಅನ್ನೋ ಪದ ಡಿಲೀಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ‘ನಿಜಕ್ಕೂ ಇದು ನೋವಿನ ಸಂಗತಿ, ಬಿಜೆಪಿ ಈಗ ಗೋ ಹತ್ಯೆ ಮಾಡುತ್ತಿದೆ. ಶುದ್ಧಹಸ್ತ ಹಿರಿಯ ದಲಿತ ನಾಯಕ ಮರಳಿ ಸ್ಪರ್ಧಿಸಲು ಆಸ್ಪದ ನೀಡದೇ ಬಿಜೆಪಿ ಅನ್ಯಾಯ ಮಾಡಿದೆ. ‘ನನ್ನ ವಿರುದ್ಧ ಒಂದೇ ಒಂದು ಭ್ರಷ್ಟಾಚಾರ ಆರೋಪವಿಲ್ಲ. ಯಾರೊಬ್ಬರೂ ನಾನು ಭ್ರಷ್ಟ ಅಂತಾ ಬೊಟ್ಟು ಮಾಡಲ್ಲ. ಟಿಕೆಟ್‌ ನಿರಾಕರಿಸಿರೋದಕ್ಕೆ ಕಾರಣ ಏನಿದೆ, ನಾನು ಮಾಡಿದ ತಪ್ಪಾದರೂ ಏನು? ಏನೇ ತಪ್ಪು ಮಾಡಿದ್ರೂ ಅದನ್ನ ತೋರಿಸಿ. ಸಂಸದನಾಗಿ 5 ವರ್ಷ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಏನೇಲ್ಲಾ ಕೆಲಸಗಳನ್ನ ಮಾಡಿದ್ದೇನೆಂದು ಜನರಿಗೆ ಗೊತ್ತಿದೆ. ಏರ್‌ಪೋರ್ಟ್‌, ಹೊಸ ರೈಲುಗಳು ಹಾಗೂ ಸಾಕಷ್ಟು ರಸ್ತೆ ನಿರ್ಮಿಸಲು ಕಾರಣವಾಗಿರುವೆ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos