ಬೆಂಗಳೂರು: ಟಾಲಿವುಡ್ ನಟಿ ಸಮಂತಾ ಸದ್ಯಕ್ಕೆ ಯಾವುದೇ ಸಿನಿಮಾ ಮಾಡ್ತಿಲ್ಲ. ಬ್ರ್ಯಾಂಡ್ ಫೋಟೋಶೂಟ್ಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಇದೀಗ ಸ್ಟೈಲಿಶ್ ಲುಕ್ನಲ್ಲೂ ಸಮಂತಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸ್ಟಾರ್ ನಟಿ ಸಮಂತಾ ರುತ್ ಪ್ರಭು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಆರೋಗ್ಯದ ಸಮಸ್ಯೆಯ ನಡುವೆಯೂ ಸಮಂತಾ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ನಿರಂತರ ಸಾಮಾಜಿಕ ಜಾಲಾ ತಾಣ ಬಳಸುತ್ತಿದ್ದಾರೆ. ಇದರಲ್ಲಿ ತಮ್ಮ ಆರೋಗ್ಯ, ಜೀವನ ಹಾಗೂ ಸಿನಿಮಾಗಳ ಕುರಿತು ಸದಾ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಮಂತಾ ಬಾತ್ ರೂಮ್ನಲ್ಲಿ ಫೋಟೋಶೂಟ್ ಮಾಡಿಸಿದ್ದು ಅವನ್ನು ಸಾಮಾಜಿಕ ಜಾಲಾ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ ಸಿನಿಮಾದ ಜೊತೆಗೆ ವೆಬ್ ಸಿರೀಸ್ ಕ್ಷೇತ್ರದಲ್ಲೂ ಬ್ಯುಸಿಯಾಗಿದ್ದಾರೆ. ‘ಫ್ಯಾಮಿಲಿ ಮ್ಯಾನ್ 2’ ವೆಬ್ ಸಿರೀಸ್ನಲ್ಲಿ ನಟಿಸಿದ ಬಳಿಕ ಅವರಿಗೆ ಭಾರಿ ಬೇಡಿಕೆ ಸೃಷ್ಟಿ ಆಗಿದೆ. ಇಂಗ್ಲಿಷ್ನ ‘ಸಿಟಾಡೆಲ್’ ವೆಬ್ ಸರಣಿಯ ಭಾರತದ ವರ್ಷನ್ನಲ್ಲಿ ಸಮಂತಾ ನಟಿಸಿದ್ದಾರೆ. ಅದರ ಬಿಡುಗಡೆಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.