ಕಪ್ಪು ಉಪ್ಪು, ಆರೋಗ್ಯಕ್ಕೆ ಲಾಭವೇ? ನಷ್ಟವೇ?

ಕಪ್ಪು ಉಪ್ಪು, ಆರೋಗ್ಯಕ್ಕೆ ಲಾಭವೇ? ನಷ್ಟವೇ?

ನ್ಯೂಸ್ ಎಕ್ಸ್ ಪ್ರೆಸ್, ಮಾ.22: ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋ ಮಾತು ನೀವು ಕೇಳೆ ಇರ್ತೀರಾ. ಅಡಿಗೆಯನ್ನ ಎಷ್ಟೇ ರುಚಿಯಾಗಿ ಮಾಡಿದ್ರೂ ಅದಕ್ಕೆ ಉಪ್ಪು ಇಲ್ಲಾ ಅಂದ್ರೆ ಅಡಿಗೆ ಚೆನ್ನಾಗಿದೆ ಅಂತಾ ಅನ್ಸೋದಿಲ್ಲ. ಆದ್ರೆ ಇನ್ನು ಕೆಲವು ಅಡಿಗೆಗಳಿಗೆ ಕಪ್ಪು ಉಪ್ಪು ಸೇರಿದ್ರೆ ಅದರ ರುಚಿಯೇ ಬೇರೆ.  ಕಬ್ಬಿಣ ಮತ್ತು ಇತರ ಖನಿಜಾಂಶಗಳಿಂದ ಕಪ್ಪು ಉಪ್ಪು ಗುಲಾಬಿ-ಬೂದು ಬಣ್ಣವನ್ನು ಹೊಂದಿದೆ. ಇದು ಆಹಾರಗಳಿಗೆ ವಿಶಿಷ್ಟ ಪರಿಮಳವನ್ನು ನೀಡುತ್ತದೆ. ಹೆಚ್ಚಿನ ಜನರು ಇದನ್ನು ಹೊಟ್ಟೆಯ ಸಮಸ್ಯೆಗಳಿಗೆ ಮನೆ ಮದ್ದಾಗಿ ಬಳಸುತ್ತಾರೆ. ಇನ್ನು ಕಪ್ಪು ಉಪ್ಪು ಅಧಿಕ ರಕ್ತದೊತ್ತಡದ ಹೊಂದಿದ ಜನರಿಗೆ ಒಳ್ಳೆಯದು ಎಂದು ಸಂಶೋಧನೆಯೊಂದು ಹೇಳಿದ್ರೆ. ಯಾಕಂದ್ರೆ ಇದರಲ್ಲಿ ಸೋಡಿಯಂ ಅಂಶ ಕಡಿಮೆಯಿರುತ್ತದೆ.

ನಾವು ಪ್ರತಿದಿನವೂ ಸೇವಿಸುವ ಬಿಳಿ ಉಪ್ಪಿನಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ ಕಪ್ಪು ಉಪ್ಪಿನಲ್ಲಿ ಸೋಡಿಯಂ ಪ್ರಮಾಣ ಕಡಿಮೆ ಇರೋದ್ರಿಂದ ಬಿಳಿ ಉಪ್ಪಿಗೆ ಪರ್ಯಾಯವಾಗಿ ಬಳಸಬಹುದು. ಕಪ್ಪು ಉಪ್ಪು ಕಡಿಮೆ ಸಂಸ್ಕರಿಸಲ್ಪಟ್ಟಿರುತ್ತದೆ ಮತ್ತು ಇದರಲ್ಲಿ ಕಡಿಮೆ ಅಯೋಡಿನ್​ ಇದ್ದು, ಆರೋಗ್ಯಕ್ಕೆ ಉತ್ತಮವಾಗಿದೆ.
. ಕೆಲವು ಅತಿಯಾಗಿ ತಿನ್ನುವುದು, ಅಲರ್ಜಿಗಳು, ಮಲಬದ್ಧತೆ, ವಿವಿಧ ಕಾರಣಗಳಿಂದ ಹೊಟ್ಟೆ ಉಬ್ಬುವುದು ಮತ್ತು ಅಸಿಡಿಟಿ ಉಂಟಾಗುತ್ತದೆ. ಕಪ್ಪು ಉಪ್ಪಿನಲ್ಲಿರುವ ಆಲ್​ಕೈನಿ ಗುಣಗಳು ಹೊಟ್ಟೆಯಲ್ಲಿ ಶೇರಣೆಯಾದ ಹೆಚ್ಚಿನ ಆ್ಯಸಿಡ್​ ಅನ್ನ್ ತೆಗೆದುಹಾಕಲು ಸಹಾಯ ಮಾಡಿ, ಕರುಳಿನ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.


ಕಪ್ಪು ಉಪ್ಪು ರಕ್ತ ಸಂಚಾರವನ್ನ ಸುಗಮಗೊಳಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ತ್ವಚೆಗೆ ಉತ್ತಮ ಕ್ಲೆನ್ಸರ್​ ಆಗಿ ಕೆಲಸ ಮಾಡುತ್ತದೆ.
ಬೆಚ್ಚಗಿನ ನೀರಿಗೆ ಒಂದು ಟೀ ಸ್ಪೂನ್​ ಕಪ್ಪು ಉಪ್ಪು ಒಂದು  ಸೇರಿಸಿ ಮತ್ತು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಡಿಟಾಕ್ಸ್​ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.  ಕಪ್ಪು ಉಪ್ಪು ನೈಸರ್ಗಿಕ ಡಿಟೊಕ್ಸಿಫೈಯರ್ ಆಗಿ ಸಹಾಯ ಮಾಡುತ್ತದೆ ಜೊತೆಗೆ ನಮ್ಮ ದೇಹದಿಂದ ಟಾಕ್ಸಿನ್ಸ್​ಗಳನ್ನ ಹೊರಹಾಕುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos