ಮಾ,1.ನ್ಯೂಸ್ ಎಕ್ಸ್ ಪ್ರೆಸ್: ಒಲಿಂಪಿಕ್ ನಲ್ಲಿ ಕಂಚಿನ ಪದಕವನ್ನು ಗೆದ್ದ ಸಾಕ್ಷಿ ಮಲಿಕ್ ಅವರು ಬಲ್ಗೇರಿಯಾದ ರೂಸ್ನಲ್ಲಿ ನಡೆದ ಡಾನ್ ಕೋಲೋವ್ 2019ರ 65 ಕೆ.ಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಫಿನ್ಲೆಂಡ್ನ ವಿಶ್ವ ಚಾಂಪಿಯನ್ ಪೆಟ್ರಾ ಒಲ್ಲಿ ಅವರನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಸೆಮಿ-ಫೈನಲ್ನಲ್ಲಿ ಸಾಕ್ಷಿ ಅವರು, ಒಲ್ಲಿ ಅವರನ್ನು 4-1 ಗೋಲುಗಳಿಂದ ಸೋಲಿಸಿದರು. 2016ರ ರಿಯೊ ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಈಗ ಚಿನ್ನದ ಪದಕಕ್ಕಾಗಿ ಫೈನಲ್ ಪಂದ್ಯದಲ್ಲಿ ಸ್ವೀಡನ್ನ ಹೆನ್ನಾ ಜಾನ್ಸನ್ ರವರನ್ನು ಎದುರಿಸಲಿದ್ದಾರೆ. 2020ರ ಟೋಕಿಯೊ ಒಲಿಂಪಿಕ್ನ ಸ್ಪರ್ಧೆಗೆ ಪ್ರತಿನಿಧಿಸಲು ನಾನು ಹೆಚ್ಚಿನ ಪರಿಶ್ರಮದ ಮೂಲಕ, ಮತ್ತೊಂದು ಒಲಿಂಪಿಕ್ ಪದಕವನ್ನು ಗೆಲ್ಲುವುದು ನನ್ನ ಕನಸು ಮತ್ತು ನಾನು ಅದನ್ನು ಸಂಪೂರ್ಣವಾಗಿ ಕೇಂದ್ರೀಕರಿಸಿದ್ದೇನೆ ಅಂತಾ ಸಾಕ್ಷಿ ಮಲಿಕ್ ತಿಳಿಸಿದ್ದಾರೆ.