ಸಾರಿಗೆ ಅಧಿಕಾರಿಗಳ ಭ್ರಷ್ಟಾಚಾರ

ಸಾರಿಗೆ ಅಧಿಕಾರಿಗಳ ಭ್ರಷ್ಟಾಚಾರ

ಕೆ.ಆರ್.ಪುರ, ಜು.30: ನಗರದಲ್ಲಿ ಸಾರಿಗೆ ಅಧಿಕಾರಿಗಳ ಭ್ರಷ್ಟಾಚಾರ ವಿರೋಧಿಸಿ ಕಸ್ತೂರಿ ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮತ್ತು ಹೆಚ್ಚುವರಿ ಕಾರ್ಯದರ್ಶಿ, ಪ್ರಾದೇಶಿಕ ಸಾರಿಗೆ ಪ್ರಾದಿಕಾರ ಕಛೇರಿ ಮುಂದೆ ಡಿ.ಎಸ್.ಎಸ್, ಕೆ.ಜೆ.ಎಸ್ ಹಾಗು ಅಂ ಆದ್ಮಿ ಪಾರ್ಟಿ ಸೇರಿದಂತೆ ಇತರೆ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಜನವಿರೋದಿ ಮೋಟರ್ ವಾಹನ ಕಾಯ್ದೆ ಆರ್.ಟಿ.ಒ ಅಧಿಕಾರಿಗಳ ಭ್ರಷ್ಟಾಚಾರ, ದೌರ್ಜನ್ಯ ಮತ್ತು ನಿರ್ಲಕ್ಷ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವ ವಹಿಸಿದ ಮಾತನಾಡಿದ ದಲಿತ ಸಂಘರ್ಷ ಸಮಿತಿ ಪರಿವರ್ತನಾ ವಾದ ರಾಜ್ಯ ಸಂಚಾಲಕ ಎಂ.ಆರ್ ವೆಂಕಟೇಶ್, ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಮೋಟಾರು ವಾಹನ ಕಾಯ್ದೆಯಿಂದಾಗಿ ಜನಸಾಮಾನ್ಯರಿಗೆ ವಾಹನ ಚಾಲಕರು ಮಾಡುವ ಸಣ್ಣಪುಟ್ಟ ತಪ್ಪಿನಿಂದ ದೊಡ್ಡ  ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ.

ಆದರೆ, ಸರ್ಕಾರ ಜಾರಿಗೊಳಿಸಿರುವ ಮೋಟಾರ್ ವಾಹನ ಕಾಯ್ದೆಯನ್ನು ಲಾಭದಾಯಕವಾಗಿ ಮಾಡಿಕೊಂಡು ಆರ್ ಟಿ ಒ ಅಧಿಕಾರಿಗಳು ಅಧಿಕೃತ  ಭ್ರಷ್ಟಾಚಾರಕ್ಕೆ ಮುಂದಾಗಿದ್ದಾರೆ .

ಹೊಸ ವಾಹನವನ್ನು ಖರೀದಿಸಿ ಡ್ರೈವಿಂಗ್  ಲೈಸೆನ್ಸ್ ಮಾಡಿಸಲು ಬರುವವರಿಗೆ ಆರ್ ಟಿ ಓ ಅಧಿಕಾರಿಗಳು ಬ್ರೋಕರ್ ಗಳನ್ನು ಗುರುತಿಸಿ ಅವರ ಮೂಲಕ ಬನ್ನಿ ಎಂದು ತಿಳಿಸಿ ತಿಳಿಸುತ್ತಿದ್ದಾರೆ. ಬ್ರೋಕರ್ ಗಳು ಹಣ ಪಡಿಯದೆ ನಮ್ಮ ಕೆಲಸವನ್ನು ಮಾಡುತ್ತಿಲ್ಲ ಎಂದು ದೂರಿದರು.

        ಹಕ್ಕೊತ್ತಾಯಗಳು

* ಜನವಿರೋಧಿ ಮೋಟಾರ್ ವಾಹನ ಕಾಯ್ದೆ ಹಿಂತೆಗೆದುಕೊಳ್ಳಬೇಕು.

* ಭ್ರಷ್ಟ ಆರ್.ಟಿ.ಓ ಅಧಿಕಾರಿ ನೇಪಾನಂದ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು.

* 15 ವರ್ಷದ ವಾಹನ ತಪಾಸಣೆ ಮುಂದುವರೆಸಬೇಕು .

* ವಾಹನ ಪರವಾನಗಿ 8ನೇ ತರಗತಿ ವಿದ್ಯಾಭ್ಯಾಸ ಪದ್ಧತಿ ರದ್ದು ಗೊಳಿಸಬೇಕು .

* ಉಬರ್ ಕಂಪೆನಿಯವರು ಚಾಲಕರನ್ನು ಕರಾರಿಗಿಂತ ಹೆಚ್ಚಿನ ಅವಧಿಗೆ ದುಡಿಸಿಕೊಂಡು ವಾಹನ ಮಾಲೀಕತ್ವದ ವರ್ಗಾವಣೆ ಮಾಡದೆ ವಂಚಿಸುತ್ತಿದ್ದಾರೆ. ಸದರಿ ಕಂಪೆನಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು ಚಾಲಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಕಾರ್ಯಕ್ರಮದಲ್ಲಿ ಡಿ.ಎಸ್.ಎಸ್ ಪಧಾದಿಕಾರಿಗಳಾದ ಮಹೇಂದ್ರ ಕುಮಾರ್, ರಾಂಪುರ ಮಹೇಶ್, ಕಾಡುಗುಡಿ ಪಾತಿಮಾ ,ಶಿಗೇಹಳ್ಳಿ ನಾಗರಾಜ್,  ಕೆ.ಜೆ.ಎಸ್ ರಾಜ್ಯಾದ್ಯಕ್ಷ ಗುಣ ಶೇಖರ್, ಪದಾಧಿಕಾರಿಗಳು ಎಂ.ರತ್ನಮ್ಮ, ನಯಾಜ್ ಪಾಷಾ, ಅಕ್ರಂ ಖಾನ್, ಇಮ್ನಾನ್, ಶ್ಯಾಮಲಾ ದೇವಿ ಸೇರಿದಂತೆ ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos