ವಾರ್ಡ್ ಸದಸ್ಯೆ ರೋಹಿನ್ ತಾಜ್ ಮೇಲೆ ಹಲ್ಲೆಗೆ ಯತ್ನಿಸಿದವರ ಬಂಧನ

ವಾರ್ಡ್ ಸದಸ್ಯೆ ರೋಹಿನ್ ತಾಜ್ ಮೇಲೆ ಹಲ್ಲೆಗೆ ಯತ್ನಿಸಿದವರ ಬಂಧನ

ಹಾಸನ, ಏ. 26, ನ್ಯೂಸ್ ಎಕ್ಸ್ ಪ್ರೆಸ್: ನಗರದ 17 ನೇ ವಾರ್ಡ್ ಚಿಕ್ಕನಾಳು ನಗರ ಸಭೆ ಸದಸ್ಯೆ ರೋಹಿನ್ ತಾಜ್ ಮನೆ ಸಮೀಪ ನಿನ್ನೆ ರಾತ್ರಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಕಳೆದ ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಮದನ್ ಬೆಂಬಲಿಗರು ರಾತ್ರಿ ಚಿಕ್ಕನಾಳು ವಾರ್ಡ್ ಸದಸ್ಯೆ ಮನೆ ಸಮೀಪ ಹೊಂಚು ಹಾಕುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು. ಪೊಲೀಸರನ್ನು ಕಂಡು ಬೆಂಬಲಿಗರು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನೂ ಪೆನ್ಷನ್ ಮೊಹಲ್ಲಾ ಪೊಲೀಸರು ಆರೋಪಿಗಳ ಎರಡು ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ‌. 2018ರ ಆಗಸ್ಟ್‌ನಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ 17ನೇ ವಾರ್ಡ್‌ನಿಂದ ಮದನ್‌ ಸ್ಪರ್ಧಿಸಿ ಸೋತಿದ್ದರು.‌ ವಾರ್ಡ್​ನ ಕೆಲವು ಮುಖಂಡರು ರೋಹಿನ್ ತಾಜ್ ಅವರಿಗೆ ಬೆಂಬಲ ನೀಡಿದ್ದೆ ತನ್ನ ಸೋಲಿಗೆ ಕಾರಣ ಎಂದು ದ್ವೇಷ ಸಾಧಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಎರಡು ದಿನಗಳ ಹಿಂದೆ ನಮ್ಮ ಬೆಂಬಲಿಗರ ಮೇಲೂ ಉದ್ದೇಶ ಪೂರ್ವಕವಾಗಿ ಹಲ್ಲೆ ನಡೆಸಿದ್ದು, ನಗರಸಭೆ ಚುನಾವಣೆ ಗೆದ್ದ ದಿನಗಳಿಂದಲೂ ಹೀಗೆ ಮಾಡುತ್ತಿದ್ದಾರೆ‌.‌‌ ಸೋತ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಅಂತಾ ವಾರ್ಡ್ ಸದಸ್ಯೆ ರೋಹಿನ್ ತಾಜ್ ಆರೋಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos