ಬೆಂಗಳೂರು, ಜೂನ್. 13: ಸುಮಾರು ದಶಕಗಳಿಂದ ಹಲವು ಬಾರಿ ರಸ್ತೆ ಅಗಲೀಕರಣದ ದುರಸ್ತಿ ಕಾರ್ಯ ಉದ್ಘಾಟನೆಯಾಗಿ ಕೆಲ ಕಾರಣಗಳಿಂದ ನೆಲಗುದಿಗೆ ಬಿದ್ದಿದ್ದ ರಸ್ತೆ ಇದೀಗ ಸ್ಥಳೀಯರೆ ಮುಕ್ತಿ ದೊರಕಿಸಿಕೊಡಲು ಮುಂದಾಗಿದ್ದರು ಸಹ ಕೆಲವರು ರಾಜಕೀಯಗಳಿಂದ ಆ ರಸ್ತೆ ಕಾಮಗಾರಿ ಇನ್ನು ಶುರವಾಗದೆ ಅಲ್ಲಿ ಓಡಾಡುವಂತ ವಾಹನ ಸವಾರರ ಪಾಡು ಮಾತ್ರ ನರಕದಂತಾಗಿದೆ.
ಹೀಗೆ ಕಿರಿದಾದ ರಸ್ತೆಯಲ್ಲಿ ವಾಹನ ಚಾಲನೆ ಮಾಡಲು ಹರಸಾಹಸ ಪಡುತ್ತಿರುವ ವಾಹನ ಸವಾರರು, ಇನ್ನೊಂದೆಡೆ ಈ ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಿಂದ ತೊಂದೆರೆ ಅನುಭವಿಸುತ್ತಿರುವ ವಾಹನ ಸವಾರರು ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಥಳಿ ಕಡೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ , ಹೌದು ಸುಮಾರು ದಶಕಗಳ ಇತಿಹಾಸವಿರುವ ಥಳಿ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು ಟ್ರಾಫಿಕ್ ಸಮಸ್ಯೆಗಳಿಂದ ಆನೇಕಲ್ ನಿಂದ ಥಳಿಗೆ ಮಾರ್ಗಕಲ್ಪಿಸುವ ರಸ್ತೆಯಲ್ಲಿ ವಾಹನ ಸವಾರರು ಹಾಗು ಜನರು ಟ್ರಾಫಿಕ್ ಜಾಮ್ ನಿಂದ ಬೇಸತ್ತು ಹೋಗಿದ್ದು ಸಾಕಷ್ಟು ಭಾರಿ ರಸ್ತೆ ಅಗಲೀಕರಣದ ಉದ್ಘಾಟನೆ ನಡೆದರು ಸಹ ಕಾಮಗಾರಿ ಭಾಗ್ಯ ಮಾತ್ರ ದೊರೆತಿಲ್ಲ.
ಇದೀಗ ಅಲ್ಲಿನ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆ ಹಾಗು ವಾಹನ ದಟ್ಟನೆಗೆ ಮುಕ್ತಿ ಕಲ್ಪಿಸಲು ತಾವೇ ಮುಂದೆ ಬಂದು ಸಮಸ್ಯೆಯನ್ನು ಬಗೆಹರಿಸಿ ಅಗಲೀಕರಣಕ್ಕೆ ಬೆಂಬಲ ಸೂಚಿಸಿದ್ದರು ಸಹ ಇದೀಗ ಕೆಲ ರಾಜಕೀಯ ನಾಯಕರು ಹಾಗು ಮುಖಂಡರು ಗದ್ದುಗೆ ಗುದ್ದಾಟಗಳಿಂದ ಕಾಮಗಾರಿ ಶುರವಾಗದೆ ವಿಳಂಬವಾಗುತ್ತಿದೆ.
ಇನ್ನು ಈ ಕಿರಿದಾದ ರಸ್ತೆ ಆನೇಕಲ್ ಪಟ್ಟಣದ ತಿಲಕ್ ವೃತ್ತದಿಂದ ಥಳಿ ಮಾರ್ಗದ ಕಡೆಗೆ ಹೋಗುವ ಮಾರ್ಗದಲ್ಲಿ ಸುಮಾರು ಒಂದು ಕಿಲೋಮೀಟರ್ ನಷ್ಟು ಕಿರಿದಾದ ರಸ್ತೆಯಿದ್ದು ಪ್ರತಿನಿತ್ಯ ಸಾವಿರಾರು ವಾಹನಗಳ ದಟ್ಟನೆಯಿಂದ ಟ್ರಾಫಿಕ್ ಜಾಮ್ ಆಗುತ್ತಿದ್ದು ಈ ಸಮಸ್ಯೆ ಮುಕ್ತಿ ನೀಡಲು ಸ್ವಯಂ ಪ್ರೇರಿತರಾಗಿ ಅಲ್ಲಿನ ಜನರು ರಸ್ತೆ ಅಗಲೀಕರಣಕ್ಕೆ ಅವಕಾಶ ಕಲ್ಪಿಸಿ ಸರ್ಕಾರದಿಂದ ಬರುವ ಪರಿಹಾರ ಹಣವನ್ನು ಅಲ್ಲಿನ 13 ಕುಟುಂಬಗಳು ಈಗಾಗಲೇ ಪಡೆದು ಅಳತೆ ಮಾಡಿ ಮಾರ್ಕ್ ಮಾಡಿದ್ದ ಜಾಗವನ್ನು ಬಿಟ್ಟುಕೊಟ್ಟು ರಸ್ತೆ ಅಗಲೀಕರಣಕ್ಕೆ ಒಪ್ಪಿಗೆ ನೀಡಿದ್ದಾರೆ.
ಆದರೆ, ಇದೀಗ ಕೆಲ ಸ್ಥಳೀಯ ರಾಜಕೀಯ ಮುಖಂಡರು ತಮ್ಮ ಬೆಳೆ ಬೇಯಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುತ್ತಿದ್ದು ಮತ್ತೆ ರಸ್ತೆ ಅಗಲೀಕರಣಕ್ಕೆ ಎಲ್ಲಿ ಅಡ್ಡಿಯಾಗುತ್ತದೆ ಎಂಬಾ ಆತಂಕದಲ್ಲಿ ವಾಹನ ಸಂಚಾರಿಗಳು ಹಾಗು ನಿವಾಸಿಗಳು ಆತಂಕಕ್ಕೆ ಹಿಡಾಗಿದ್ದು ಆದಷ್ಟು ಬೇಗ ಈ ರಸ್ತೆಯನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬುದು ಅಲ್ಲಿನ ವಾಹನ ಸವಾರರ ಹಾಗು ನಿವಾಸಿಗಳ ಒತ್ತಾಯವಾಗಿದೆ.
ಒಟ್ಟಿನಲ್ಲಿ ಸಾಕಷ್ಟು ವರ್ಷಗಳಿಂದ ರಸ್ತೆ ಅಗಲೀಕರಣಕ್ಕೆ ಮುಂದಾಗಿ ಸುಮ್ನನಾಗುತ್ತಿದ್ದ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಅಲ್ಲಿನ ಜನರ ಹಾಗು ವಾಹನ ಸವಾರರ ಸಮಸ್ಯೆಗೆ ಸ್ಪಂದಿಸಿ ದಿಟ್ಟ ನಿರ್ಧಾರ ತೆಗೆದು ಕೊಂಡು ರಸ್ತೆ ಅಗಲೀಕರಣಕ್ಕೆ ಮುಂದಾಗುತ್ತಾರ ಎಂದು ಕಾದು ನೋಡಬೇಕಿದೆ.