ಬೆಂಗಳೂರು,ನ. 24 : ಟ್ರಾಫಿಕ್ ಪೊಲೀಸರು ರಸ್ತೆ ಕ್ಲೀನ್ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬನಶಂಕರಿ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ಟಿ.ಕೃಷ್ಣ ನೇತೃತ್ವದಲ್ಲಿ ಹೊಸಕೆರೆಹಳ್ಳಿ ಬಳಿಯ ಪಿಇಎಸ್ ಕಾಲೇಜ್ ಬಳಿಯ ಸರ್ವೀಸ್ ರಸ್ತೆ ಕ್ಲೀನ್ ಮಾಡಲಾಗಿದೆ.
ಹಲವು ವರ್ಷಗಳಿಂದ ಸರ್ವಿಸ್ ರಸ್ತೆಗೆ ಕಸ ಹಾಕಿದ್ದರಿಂದ ಜನರಿಗೆ ಓಡಾಡಲು ಆಗುತ್ತಿರಲಿಲ್ಲ. ಈ ಕಾರಣಕ್ಕೆ ಸಿಬ್ಬಂದಿ ಜೊತೆ ಸೇರಿ ಬನಶಂಕರಿ ಟ್ರಾಫಿಕ್ ಪೊಲೀಸರು, ನಿನ್ನೆ ಜೆಸಿಬಿ ತರಿಸಿ ರಸ್ತೆ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.