ಪರಿಶಿಷ್ಟ ಜಾತಿಯ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ

ಪರಿಶಿಷ್ಟ ಜಾತಿಯ ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ

ಬೆಂಗಳೂರು, ನ. 19: ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ/ ಸಾರ್ವಜನಿಕ ಉದ್ಯೋಗಳಿಗೆ ಈಗಿರುವ ಮಿಸಲಾತಿ ಪ್ರಮಾಣವನ್ನು ಜನಸಂಖ್ಯೆಗನಣುಗುನವಾಗಿ ಹೆಚ್ಚಿಸುವ ಕುರಿತು ವರದಿಯನ್ನು ಸಲ್ಲಿಸಲು ನಿವೃತ್ತ ನ್ಯಾಯಮೂರ್ತಿ ನಾಗ ಮೋಹನ್ ದಾಸ್ ರವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೊಜಿಸಲಾಗಿದ್ದು, ಡಾ. ದಾದಾ ಸಾಹೇಬ್ ಅಂಬೇಡ್ಕರ್ ನಮಗೆ ದೊರಕಿಸಿ ಕೊಟ್ಟ ಮೂಲಭೂತ ಹಕ್ಕನ್ನು ಸದ್ಬಳಕೆ ಮಾಡಿಕೊಂಡು ಲಿಖಿತ ರೂಪದಲ್ಲಿ ಏಕ ಸದಸ್ಯ ಆಯೋಗಕ್ಕೆ ಸವಿವಾದ ಮನವಿಯನ್ನು ದಿನಾಂಕ 1೦/12/2019 ಒಳಗಾಗಿಯೇ ಮನವಿಯನ್ನು ಸಲ್ಲಿಸಬೇಕಾಗಿದೆ. ಪರಿಶಿಷ್ಟ ಜಾತಿ ಸಮುದಾಯದ ಮಿಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯಿಸಲು ಪೂರ್ವ ಭಾವಿ ಸಭೆಯನ್ನು ನಾಳೆ ಬೆಳಗ್ಗೆ 11 ಗಂಟೆಗೆ ಗಾಂಧಿಭವನದಲ್ಲಿ ಏರ್ಪಡಿಸಲಾಗಿದೆ ಎಂದು ಹೇಳಿದರು.

ನಗರದ ಪ್ರೆಸ್ ಕ್ಲಬ್ನ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್. ಆಂಜನೇಯ  ದೇಶದ ಮೊದಲನೆಯ ಜನಗಣತಿ ಆಧಾರದ ಮೇರಿಗೆ  ಅವಕಾಶ ವಂಚಿತ ಪರಿಶಿಷ್ಟ ಜಾತಿ ಸಮುದಾಯಕ್ಕೆ ಮಿಸಲಾತಿ ಪ್ರಮಾಣವನ್ನು ಜನಸಂಖ್ಯೆಗನಣುಗುನವಾಗಿ ಹೆಚ್ಚಿಸಬೆಕೆಂದು ಹೇಳಿದರು.  ಹಾಗೂ ಅವಕಾಶ ವಂಚಿತ ಸಮುದಾಯಗಳಿಗೆ ಸಮಾನ ಸ್ವೀಕಾರ ನೀಡಬೆಕೆಂದು ಮನವಿ ಮಾಡಿದರು.

ಹಿಂದಿನ ಸಿದ್ದ ರಾಮಯ್ಯ ಸರ್ಕಾರದಲ್ಲಿ  ನಾನು ಸಚಿವನಾಗಿದ್ದಾಗ 200ರೂ. ಕೋಟಿ ವೆಚ್ಚದಲ್ಲಿ ಕಾಂತರಾಜು ವರದಿಯನ್ನು ಸಿದ್ದ ಪಡಿಸಿ ರಾಜ್ಯದಲ್ಲಿರುವ ಪ್ರತಿಯೊಂದು ಹಳ್ಳಿ, ಹೋಬಳಿ, ತಾಲೂಕು ಮಟ್ಟದಲ್ಲಿ ಜಾತಿ ಗಣತಿ ಮಾಡಿಸಲಾಗಿತ್ತು, ಆದರೆ ನಾನಾ ಕಾರನದಿಂದ ಅಪೂರ್ಣವಾಗಿದೆ ಎಂದು ಹೇಳಿದ ಅವರು, ಕಾಂತರಾಜು ವರದಿಯನ್ನ ಈಗಿರುವ ರಾಜ್ಯ ಸರ್ಕಾರ ಜಾರಿ ತರುವಂತೆ ಆಗ್ರಹಿಸಿ, ಜನಗಣತಿ ಅಧಾರದ ಮೇಲೆ ಇಂದಿಗೂ ಕೂಡ ಮೀಸಲಾತಿ ನೀಡಲಾಗುತ್ತಿದೆ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನರ ಸಂಖ್ಯೆ 24% ರಷ್ಟು ಇದ್ದು ಕಾಂತರಾಜು ವರದಿಯನ್ನು ಜಾರಿ ಗೊಳಿಸಿ  ಕಡು ಬಡವರಿಗೂ ಸಹ  ಸಮಾನ ಮೀಸಲಾತಿ ದೊರೆಯಲಿ ಎಂದು ಮನವಿ ಮಾಡಿಕೊಂಡರು.

ಸಮುದಾಯದ ಪ್ರತಿನಿಧಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸುವ ಸಲುವಾಗಿ ಈ ಸಭೆಯಲ್ಲಿ  ಕರೆಯಲಾಗಿದ್ದು, ನಾಳೆ ನಡೆಯುವ ಸಭೆಯಲ್ಲಿ  ದಲಿತ ಮುಖಂಡರು, ನಿವೃತ್ತ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos