ರೇವಣ್ಣನವರ ಬೆಂಗಾವಲು ವಾಹನದಲ್ಲಿ 1 ಲಕ್ಷ ಕ್ಕೂ ಹೆಚ್ಚು ಹಣ ಪತ್ತೆ

ರೇವಣ್ಣನವರ ಬೆಂಗಾವಲು ವಾಹನದಲ್ಲಿ 1 ಲಕ್ಷ ಕ್ಕೂ ಹೆಚ್ಚು ಹಣ ಪತ್ತೆ

ಹಾಸನ, ಏ. 17, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆ ಮುಗಿಯುವ ವರೆಗೆ ಎಲ್ಲಂದರಲ್ಲಿ ಹಣದ ಸುರಿಮಲೆ. ಹೌದು, ಸಚಿವ ಹೆಚ್.ಡಿ ರೇವಣ್ಣನವರ ಬೆಂಗಾವಲು ವಾಹನದಲ್ಲಿ  ಸುಮಾರು 1 ಲಕ್ಷ  ಹಣ ಪತ್ತೆಯಾಗಿರುವ ಘಟನೆ ನಡೆದಿದೆ. ನಿನ್ನೆ ರಾತ್ರಿ ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿರುವ ಚನ್ನಾಂಬಿಕ ಕಲ್ಯಾಣ ಮಂಟಪದ ಬಳಿ ಸಚಿವ ಹೆಚ್.ಡಿ ರೇವಣ್ಣನವರ ಬೆಂಗಾವಲು ವಾಹನವನ್ನು ಚುನಾವಣಾ ಅಧಿಕಾರಿಗಳು ಪರಿಶೀಲನೆ ಮಾಡಿದ ವೇಳೆಯಲ್ಲಿ 1 ಲಕ್ಷದ 20 ಸಾವಿರ ಹಣ ಪತ್ತೆಯಾಗಿದ್ದು, ಘಟನೆಗೆ ಸಂಬಂಧಪಟ್ಟಂತೆ ವಾಹನದಲ್ಲಿದ್ದ ಚಂದ್ರಯ್ಯ ಹಾಗೂ ಇನ್ನೋಬ್ಬರ ವಿರುದ್ದ ಪ್ರಕರಣದ ದಾಖಲಾಗಿದ್ದು, ಅಧಿಕಾರಿಗಳು, ಹಣ ವಶಪಡಿಸಿಕೊಂಡಿದ್ದು ಎಫ್ ಐ ಆರ್ ದಾಖಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos