ಬೆಂಗಳೂರು, ನ. 5 : ಢಾಕಾ ಬನಾನ ಎಂದು ಕರೆಯಲ್ಪಡುವ ಕೆಂಪು ಬಾಳೆ ಹಣ್ಣಿ ಹಳದಿ ಬಾಳೆಹಣ್ಣಿಗಿಂತ ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ. ಹಳಗಿ ಬಾಳೆಹಣ್ಣಿನಷ್ಟು ಜನಪ್ರಿಯವಲ್ಲದ ಈ ಬಾಳೆ ಹಣ್ಣು ಉತ್ತಮ ಪರಿಮಳ ಹೊಂದಿದ್ದು , ಸಾಮಾನ್ಯ ಬಾಳೆಹಣ್ಣಿಗಿಂತ ಹೆಚ್ಚು ಸಿಹಿ ಇರುತ್ತದೆ.
ಆರೋಗ್ಯಕ್ಕೆ ಇದರ ಪ್ರಯೋಜನಗಳೇನು ಎಂಬುದನ್ನು ನೋಡೋಣ ಬನ್ನಿ
ಪೌಷ್ಟಿಕಾಂಶ ಪ್ರಮಾಣ ಹೆಚ್ಚಿರುತ್ತದೆ. ಆದರೆ ಇದನ್ನು ಹಣ್ಣಾದ ಮೇಲೆಯೇ ತಿನ್ನಬೇಕು. ಇದರ ಸೇವನೆಯಿಂದ ದೇಹದ ತೂಕ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ. ಕಾರಣ ಇದರಲ್ಲಿ ನಾರಿನಂಶ ಹೆಚ್ಚಿದ್ದು , ಕ್ಯಾಲೋರಿ ಕಡಿಮೆ ಇದೆ. ಒಂದು ಕೆಂಪು ಬಾಳೆಹಣ್ಣಿನಲ್ಲಿ 90 ಕ್ಯಾಲೊರಿ ಇರುತ್ತದೆ.
1. ಕೆಂಪು ಬಾಳೆ ಹಣ್ಣಿನಲ್ಲಿ ನಾರಿನಂಶ ಹೆಚ್ಚಿದೆ. ಈ ನಾರಿನಲ್ಲಿ ಕಾರ್ಬೊಹೈಡ್ರೇಟ್ ಹೇರಳವಾಗಿರುತ್ತದೆ. ಆದ್ದರಿಂದ ಅಜೀರ್ಣ, ವಾಯುಪ್ರಕೋಪ ಮುಂತಾದ ತೊಂದರೆ ಇರುವವರಿಗೆ ಕೆಂಪು ಬಾಳೆಹಣ್ಣು ಸಂಜೀವಿನಿಯಂತೆ ಕೆಲಸ ಮಾಡುತ್ತದೆ.
2. ನಾವು ತಿನ್ನುವ ಆಹಾರದಿಂದ ನಮ್ಮ ದೇಹಕ್ಕೆ ದಿನಕ್ಕೆ ಶೇಕಡ 16 ರಷ್ಟು ನಾರಿನಂಶ ಬೇಕು. ಆದರೆ, ಒಂದು ಕೆಂಪು ಬಾಳೆಹಣ್ಣೊಂದರಲ್ಲೇ ನಮಗೆ 4 ಗ್ರಾಂ ನಾರಿನಂಶ ಸಿಗುತ್ತದೆ.
3. ನಮ್ಮ ಕಿಡ್ನಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಪೊಟಾಷಿಯಂ ಅತ್ಯಗತ್ಯ. ಕೆಂಪು ಬಾಳೆಹಣ್ಣಿನಲ್ಲಿ ಈ ಅಂಶ ಸಾಕಷ್ಟು ಪ್ರಮಾಣದಲ್ಲಿದ್ದು, ಅದು ಕಿಡ್ನಿಯಲ್ಲಿ ಕಲ್ಲಿನ ಬೆಳವಣಿಗೆ, ಹೃದಯ ಸಂಬಂಧಿ ಕಾಯಿಲೆ ಹಾಗು ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ.