ಬೆಂಗಳೂರು, ಜೂ. 20 : ಆಧಾರ್ ದೃಢೀಕರಣ ಮಾಡಿಸದಿದ್ದರೆ, ಜುಲೈ 31ರೊಳಗೆ ಪಡಿತರ ಚೀಟಿಯ ಇ-ಕೆವೈಸಿ(ಆಧಾರ್ ದೃಢೀಕರಣ) ನಿಮ್ಮ ಪಡಿತರ ಚೀಟಿ ರದ್ದಾಗಲಿದೆ! ಈ ಬಗ್ಗೆ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮಹತ್ವದ ಸೂಚನೆ ನೀಡಿದ್ದು, ಬಿಪಿಎಲ್, ಎಪಿಎಲ್, ಅಂತ್ಯೋದಯ ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬದ ಎಲ್ಲ ಸದಸ್ಯರು ಇ-ಕೆವೈಸಿ ಪ್ರಕ್ರಿಯೆ ಮಾಡಬೇಕು.
ಈ ಪ್ರಕ್ರಿಯೆ ಉಚಿತವಾಗಿ ನ್ಯಾಯಬೆಲೆ ಅಂಗಡಿಯಲ್ಲಿಯೇ ಮಾಡಿಕೊಳ್ಳಬಹುದು. ಇಲ್ಲವಾದರೆ ಆಗಸ್ಟ್ ನಿಂದ ಪಡಿತರ ಚೀಟಿ ರದ್ದಾಗಲಿದೆ. ಹಾಗಾಗಿ ನಿಮ್ಮ ನ್ಯಾಯ ಬೆಲೆ ಅಂಗಡಿಯಲ್ಲಿ ನಿಮ್ಮ ಆಧಾರ್ ದೃಢೀಕರಣ ಮಾಡಿಸಿ