ಬೆಂಗಳೂರು, ಜೂನ್. 13: ಕೆವೈಸಿಗೆ ಕುಟುಂಬಸದಸ್ಯರೆಲ್ಲರೂ ಹೆಬ್ಬೆಟ್ಟಿನ ಗುರುತು ನೀಡಬೇಕೆಂದು ಆಹಾರಇಲಾಖೆ ತಿಳಿಸಿದ ಹಿನ್ನೆಲೆ ತಾಲೂಕಿನಲ್ಲಿ ಜೂ. 1ರಿಂದ ಕಾರ್ಯ ಆರಂಭವಾಗಿದ್ದು, ‘ಅನ್ನಭಾಗ್ಯ’ಕೇಂದ್ರಗಳಲ್ಲಿ ಇ-ಕೆವೈಸಿ ನೀಡಲು ತಾಲೂಕು ಆಹಾರ ಇಲಾಖೆ ಜುಲೈ 31ರವರೆಗೆ ಗಡುವು ನೀಡಿದೆ.
ಪಡಿತರ ಚೀಟಿ ಹೊಂದಿದ ಸದಸ್ಯರ ಪೈಕಿ ಅನಾರೋಗ್ಯ, ಅಂಗವೈಕಲ್ಯದಿಂದ ಬಳಲುತ್ತಿರುವ ಸದಸ್ಯರಿಗೆ ವಿನಾಯಿತಿನೀಡಲಾಗಿದೆ. ಇವರಿಗೆ ವಿನಾಯಿತಿ ನೀಡುವ ಅಧಿಕಾರನ್ನು ಅನ್ನಭಾಗ್ಯ ಕೇಂದ್ರದ ಮುಖ್ಯಸ್ಥರಿಗೆ ನೀಡಲಾಗಿದೆ.
ತಾಲೂಕಿನಲ್ಲಿ 82 ನ್ಯಾಯಬೆಲೆ ಅಂಗಡಿಗಳಿದ್ದು, 906 ಅಂತ್ಯೋದಯ ಪಡಿತರ ಚೀಟಿಗೆ 3596 ಜನ, 67812 ಬಿಪಿಎಲ್ ಕಾರ್ಡ್ ನಲ್ಲಿರುವ 223600 ಜನ ಹಾಗೂ705 ಎಪಿಎಲ್ ಕಾರ್ಡ್ ನ 1600 ಜನ ಸೇರಿ ತಾಲೂಕಿನ228796 ಜನ ಇ-ಕೆವೈಸಿಯನ್ನು 2 ತಿಂಗಳ ಒಳಗೆ ಮಾಡಿಸಿಕೊಳ್ಳಬೇಕಿದೆ.
ಗ್ರಾಹಕರಿಗೆ ತೊಂದರೆಯಾಗದಂತೆ ಕ್ರಮ: ರಾಷ್ಟ್ರೀಯಆಹಾರ ಭದ್ರತಾ ಕಾಯ್ದೆಯಲ್ಲಿ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಫಲಾನುಭವಿಗಳಿಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಲು ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ.
ತ್ವರಿತವಾಗಿ ನೋಂದಣಿಮುಗಿಯಲಿದೆ. ಬಹುತೇಕ ನ್ಯಾಯಬೆಲೆ ಅಂಗಡಿಗಳುಲ್ಯಾಪ್ಟಾಪ್ ಬಳಸುತ್ತಿದ್ದು, ವಿದ್ಯುತ್ ಕಡಿತದಿಂದ ಹೆಚ್ಚಿನತೊಂದರೆಯಾಗುವುದಿಲ್ಲ ಎಂದು ದೊಡ್ಡಬಳ್ಳಾಪುರ ಆಹಾರನಿರೀಕ್ಷಕ ರಮೇಶ್ ತಿಳಿಸಿದ್ದಾರೆ.