ರೊಮ್ಯಾನ್ಸ್ ಗೆ ರಶ್ಮೀಕಾ ರೆಡಿ!

ರೊಮ್ಯಾನ್ಸ್ ಗೆ ರಶ್ಮೀಕಾ ರೆಡಿ!

ಬೆಂಗಳೂರು, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ‘ಮಹರ್ಷಿ’ ಗೆಲುವಿನ ಸಂಭ್ರಮದಲ್ಲಿರುವ  ಟಾಲಿವುಡ್ ಸೂಪರ್ ಸ್ಟಾರ್  ಮಹೇಶ ಬಾಬು 26ನೇ ಚಿತ್ರಕ್ಕೆ ರೆಡಿಯಾಗಿದ್ದಾರೆ. ಮಹೇಶ್ ಅವರ ತಂದೆ ಕೃಷ್ಣ ಅವರ 75ನೇ ಜನುಮ ದಿನದ ಸಂದರ್ಭದಲ್ಲಿ ಚಿತ್ರದ ಶೀರ್ಷಿಕೆಯನ್ನು ಘೋಷಿಸಲಾಗಿದೆ.

ಸರಿಯಾಗಿ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದ್ದು ಜೂನ್‌ನಿಂದ ಶೂಟಿಂಗ್ ಆರಂಭವಾಗಲಿದೆ.  ವಿಶೇಷ ಎಂದರೆ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್ ಎಂಬ ಸುದ್ದಿ ಮೊದಲೇ ಲೀಕ್ ಆಗಿತ್ತು. ಈಗದು ಪಕ್ಕಾ ಆಗಿದೆ. ಮಹೇಶ್ ಬಾಬು ಸಿನಿಮಾದಲ್ಲಿ ಅಭಿನಯಿಸುತ್ತಿರುವುದಕ್ಕೆ ಎಗ್ಜೈಟ್ ಆಗಿದ್ದೇನೆ. ಸಿನಿಮಾ ನಿಮ್ಮೆಲ್ಲರಿಗೂ ಇಷ್ಟವಾಗುತ್ತದೆ ಎಂಬ ಆಶಾಭಾವನೆಯಲ್ಲಿದ್ದೇನೆ ಎಂದಿದ್ದಾರೆ ರಶ್ಮಿಕಾ

 

ಫ್ರೆಶ್ ನ್ಯೂಸ್

Latest Posts

Featured Videos