ಬೆಂಗಳೂರು, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ಪೋಷಕರು ಮಗಳಿಗಾಗಿ ರಾತ್ರಿಯೆಲ್ಲಾ ಹುಡುಕಾಡಿದರೂ, ಆಕೆಯ ಸುಳಿವು ಸಿಗಲಿಲ್ಲ. ಬೆಳಗಿನ ಜಾವ ಮನೆಗೆ ಬಂದ ಆಕೆ ಹೇಳಿದ್ದನ್ನು ಕೇಳಿದ ಪೋಷಕರು ಗಾಬರಿಯಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. 15 ವರ್ಷದ ಅಪ್ರಾಪ್ತೆಯನ್ನು ಬೆದರಿಸಿ, ರಾತ್ರಿಯಿಡಿ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಪ್ರಾಪ್ತೆಯನ್ನು ರೂಮಿಗೆ ಕರೆದುಕೊಂಡು ಹೋದ ಇಬ್ಬರು ಯುವಕರು ರಾತ್ರಿಯೆಲ್ಲಾ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಗಳು ಮನೆಗೆ ಬಾರದ ಕಾರಣ ಪೋಷಕರು ಹುಡುಕಾಟ ನಡೆಸಿದ್ದು, ಬೆಳಗಿನ ಜಾವ ಆಕೆ ಮನೆಗೆ ಹಿಂತಿರುಗಿದ್ದಾಳೆ. ಪೋಷಕರು ವಿಚಾರಿಸಿದರು ಯಾವುದೇ ವಿಷಯ ತಿಳಿಸಿಲ್ಲ. ಕೋಪಗೊಂಡ ಪೋಷಕರು ಗದರಿಸಿದಾಗ, ನಡೆದ ಕೃತ್ಯವನ್ನು ಬಾಯಿಬಿಟ್ಟಿದ್ದಾಳೆ. ಯುವಕರಿಬ್ಬರು ರೂಮಿಗೆ ಕರೆದೊಯ್ದು ಬೆದರಿಸಿ ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದಾಳೆ. ಪೋಷಕರು ಅತ್ತಿಬೆಲೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಅತ್ಯಾಚಾರ ಎಸಗಿದ್ದ ಒಬ್ಬ ಯುವಕನನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಮತ್ತೊಬ್ಬನಿಗಾಗಿ ಹುಡುಕಾಟ ನಡೆಸಲಾಗಿದೆ ಎನ್ನಲಾಗಿದೆ.