ಮುಂಬೈ, ಆ. 26 : ರೈಲ್ವೆ ನಿಲ್ದಾಣದಲ್ಲಿ ಹಾಡು ಹಾಡುವ ಮೂಲಕ ಬಾಲಿವುಡ್ಗೆ ರಾನು ಮೊಂಡಲ್ ಎಂಟ್ರಿ ಕೊಟ್ಟಿದ್ದಾರೆ. ರಾನು ಅವರ ಮೊದಲ ಹಾಡಿಗೆ 6ರಿಂದ 7 ಲಕ್ಷ ರೂ. ಸಂಭಾವನೆ ಸಿಕ್ಕಿದ್ದು, ನಿರಾಕರಿಸಿದ್ದಾರೆ. ಬಳಿಕ ಗಾಯಕ ಹಿಮೇಶ್ ರೇಶ್ಮಿಯಾ ಅವರು ಬಲವಂತವಾಗಿ ಆ ಹಣವನ್ನು ರಾನು ಅವರಿಗೆ ನೀಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಹಿಮೇಶ್ ರೇಶ್ಮಿಯಾ ಅವರು ತಮ್ಮ ಮುಂಬರುವ `ಹ್ಯಾಪಿ ಹಾರ್ಡಿ ಮತ್ತು ಹೀರ್’ ಚಿತ್ರದಲ್ಲಿ ಹಾಡು ಹಾಡಲು ರಾನು ಅವರಿಗೆ ಅವಕಾಶ ನೀಡಿದ್ದರು. ರಾನು ಅವರು ಈ ಚಿತ್ರದ ‘ತೇರಿ ಮೇರಿ ಕಹಾನಿ’ ಎಂಬ ಟೈಟಲ್ ಹಾಡನ್ನು ಹಾಡಿದ್ದಾರೆ. ವರದಿಗಳ ಪ್ರಕಾರ ರಾನು ಅವರು ಈ ಹಾಡು ಹಾಡಿದ್ದಕ್ಕೆ ಹಿಮೇಶ್ ಅವರಿಗೆ 6ರಿಂದ 7 ಲಕ್ಷ ರೂ. ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ರಾನು ಈ ಹಣವನ್ನು ಪಡೆಯಲು ನಿರಾಕರಿಸಿದ್ದು, ಹಿಮೇಶ್ ಅವರು ಬಲವಂತವಾಗಿ ಈ ಹಣವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.