ಮುಂಬೈ, ಆ. 28 : ಬೇಡ ಎಂದರು ಗಾಯಕ ಹಿಮೇಶ್ ರೇಶ್ಮಿಯಾ ರಾನು ಮೊಡಲ್ ಅವರಿಗೆ 7 ಲಕ್ಷ ರೂ. ಸಂಭಾವನೆ ನೀಡಿದ್ದಾರೆ. ಈಗ ಬಾಲಿವುಡ್ ಭಾಯ್ಜಾನ್ ಸಲ್ಮಾನ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ರಾತ್ರೋರಾತ್ರಿ ಸ್ಟಾರ್ ಆದ ರಾನು ಮೊಂಡಲ್ ಅವರಿಗೆ 55 ಲಕ್ಷ ರೂ. ಮೌಲ್ಯದ ಮನೆ ಕೊಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಲ್ಮಾನ್ ತಮ್ಮ ಮುಂಬರುವ ‘ದಬಾಂಗ್-3’ ಚಿತ್ರದಲ್ಲಿ ಹಾಡಲು ಅವಕಾಶ ನೀಡಲಿದ್ದಾರೆ ಎಂಬ ವಿಷಯ ಕೇಳಿ ಬರುತ್ತಿತ್ತು. ಸದ್ಯ ಸಲ್ಮಾನ್ ಕಷ್ಟದಲ್ಲಿ ಇರುವವರಿಗೆ ಯಾವಾಗಲೂ ಸಹಾಯ ಮಾಡುತ್ತಾರೆ. ಹಾಗೆಯೇ ಅವರು ರಾನು ಅವರಿಗೂ ಸಹಾಯ ಮಾಡಿದ್ದಾರೆ ಎನ್ನಲಾಗಿದೆ.