ವಯನಾಡ್: ಪ್ರಸಕ್ತ ರಣಜಿ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ ವಿದರ್ಭ ಮೊದಲ ತಂಡವಾಗಿ ಫೈನಲ್ ಪ್ರವೇಶಿಸಿದೆ. ಕೇರಳ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 11 ರನ್ ಗೆಲುವು ಸಾಧಿಸಿದ ವಿದರ್ಭ ಸತತ 2ನೇ ಭಾರಿಗೆ ಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಕೇರಳ ತಂಡಕ್ಕೆ ನಿರಾಸೆಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇರಳ ಕೇವಲ 106 ರನ್‌ಗಳಿಗೆ ಆಲೌಟ್ ಆಗಿತ್ತು. ಉಮೇಶ್ ಯಾದವ್ 7 ವಿಕೆಟ್ ಕಬಳಿಸೋ ಮೂಲಕ ವಿದರ್ಭಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟಿದ್ದರು.
ವಿದರ್ಭ ಮೊದಲ ಇನ್ನಿಂಗ್ಸ್‌ನಲ್ಲಿ 208 ರನ್ ಸಿಡಿಸಿ ಆಲೌಟ್ ಆಗಿತ್ತು. ಫೈಯಜ್ ಫಜಲ್ 75 ರನ್ ಭಾರಿಸಿದರು. ಈ ಮೂಲಕ ವಿದರ್ಭ 102 ರನ್ ಮುನ್ನಡೆ ಪಡೆಯಿತು. ಇನ್ನು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೇರಳ ಚೇತರಿಸಿಕೊಳ್ಳಲು ಅವಕಾಶ ಸಿಗಲಿಲ್ಲ. ಮತ್ತೆ ಉಮೇಶ್ ಯಾದವ್ ದಾಳಿಗೆ ಕುಸಿದ ಕೇರಳ 91 ರನ್‌ಗೆ ಆಲೌಟ್ ಆಯಿತು. ಈ ಮೂಲಕ ವಿದರ್ಭ ಇನ್ನಿಂಗ್ಸ್ ಹಾಗೂ 11 ರನ್ ಗೆಲುವು ಸಾಧಿಸಿತು.