ನವದೆಹಲಿ, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ನೂತನವಾಗಿ ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ನಿರ್ಮಲ ಸೀತಾರಾಮನ್ ಅವರಿಗೆ ಕಾಂಗ್ರೆಸ್ ನ ಜಾಲತಾಣ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿದ ಅವರು, 1970 ರಲ್ಲಿ ಇಂದಿರಾಗಾಂಧಿ ಅವರು ನಿಭಾಯಿಸಿದ ಹಣಕಾಸು ಖಾತೆಯನ್ನು ನೀವು ನಿಭಾಯಿಸಲು ಹೊರಟಿದ್ದೀರಿ, ನಿಮಗೆ ಶುಭವಾಗಲಿ ಮತ್ತು ದೇಶದ ಅರ್ಥವ್ಯವಸ್ಥೆಯಲ್ಲಿ ಗಣನೀಯ ಸುಧಾರಣೆಯನ್ನು ನೀವು ತರುತ್ತೀರಿ ಎಂದು ನಾವು ನಂಬಿದ್ದೇವೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ