ಬೆಂಗಳೂರು, ಜೂನ್.1, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಯಾವಾಗಲೂ ಒಂದಲ್ಲ ಒಂದು ವಿಷಯಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿರುತ್ತಾರೆ. ಹಲವಾರು ಬಾರಿ ಬಿಜೆಪಿ ಪಕ್ಷ ಹಾಗೂ ಮೋದಿಯವರ ವಿರುದ್ದ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ಇದರಿಂದ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು ಕೂಡ ರಮ್ಯಾ ಯಾಕೋ ಬುದ್ದಿ ಕಲಿತಂಗೆ ಕಾಣುತ್ತಿಲ್ಲ. ಅಂಬಿಯವರು ನಿಧನರಾದಾಗಲೂ ಕೂಡ ಬಂದಿರಲಿಲ್ಲ. ಇದರಿಂದ ರಮ್ಯ ಮಂಡ್ಯ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೊಮ್ಮೆ ಟ್ವೀಟ್ ಮಾಡಿ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಶುಭಕೋರಿದ್ದಾರೆ. ಆದರೆ ಅವರು ಮಾಡಿರುವ ಟ್ವಿಟ್ ಮಾತ್ರ ವ್ಯಂಗ್ಯಭರತವಾಗಿದು ಇದೀಗ ವಿವಾದಕ್ಕೆ ಗುರಿಯಾಗಿದೆ.. 1970ರಲ್ಲಿ ಇಂದಿರಾಗಾಂಧಿ ಅವರು ಮಾತ್ರ ಹಣಕಾಸು ಖಾತೆಯನ್ನು ನಿಭಾಯಿಸಿದ್ದರು. ಇಂದು ನೀವು ನಿಭಾಯಿಸಲು ಮುಂದಾಗಿದ್ದೀರಿ. ನೀವು ಅಧಿಕಾರ ಸ್ವೀಕಾರವಾಗಿರುವ ಕಾರಣ ಮಹಿಳೆಯರಿಗೆ ಇದರಿಂದ ಹೆಮ್ಮೆಯಾಗುತ್ತಿದೆ. ಇನ್ನು ದೇಶದಲ್ಲಿ GDP ಸುಧಾರಿಸಿಲ್ಲ. ನೀವು ಅರ್ಥವ್ಯವಸ್ಥೆಗೆ ಚೇತರಿಕೆ ತರುತ್ತೀರಿ ಎಂದು ನಾನು ನಂಬಿದ್ದೇನೆ. ನಿಮಗೆ ನಮ್ಮ ಬೆಂಬಲವಿದೆ. ಶುಭಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ. ರಮ್ಯಾ ಅವರ ಟ್ವೀಟ್ ಗೆ ಸಾಕಷ್ಟು ವ್ಯಂಗ್ಯಮಿಶ್ರಿತ ಪ್ರತಿಕ್ರಿಯೆಗಳು ಹೊರಬಂದಿದ್ದು, ಮತ ಚಲಾವಣೆ ಮಾಡದ ಅವರ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.