ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ರಂಗೇರಿದ್ದು ರಾಜ್ಯದಲ್ಲೇ ಅಭ್ಯರ್ಥಿಗಳು ಭರ್ಜರಿ ಮತಯಾಚಿಸುತ್ತಿದ್ದಾರೆ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ತೇಜಸ್ಪಿ ಸೂರ್ಯ ಅವರು ಸ್ಪರ್ಧಿಸುತ್ತಿದ್ದಾರೆ ಅವರ ವಿರುದ್ಧವಾಗಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಸ್ಪರ್ಧಿಸುತ್ತಿದ್ದಾರೆ, ಈ ಬಾರಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಇಂದು ಮುಂಜಾನೆ ಹೆಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಬರುವ ಮಂಗಮ್ಮನ ಪಾಳ್ಯ ವಾರ್ಡ್ ಉದ್ಯಾನವನ ಮತ್ತು ಆಟದ ಮೈದಾನದಲ್ಲಿ ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ಶ್ರೀಯುತ ರಾಮಲಿಂಗ ರೆಡ್ಡಿ ರವರು, ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀಮತಿ ಸೌಮ್ಯ ರೆಡ್ಡಿ ರವರ ಪರವಾಗಿ ಸಾರ್ವಜನಿಕರ ಜೊತೆ ಹೆಜ್ಜೆ ಹಾಕುತ್ತಾ ಮತಯಾಚನೆ ಮಾಡಿದರು.
ಹೆಚ್ ಎಸ್ ಆರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಐದು ಗ್ಯಾರಂಟಿಗಳ ಅನುಷ್ಠಾನ ಸಮಿತಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಟಿ ವಾಸುದೇವ ರೆಡ್ಡಿ ರವರು, ಬ್ಲಾಕ್ ಅಧ್ಯಕ್ಷರುಗಳಾದ ರವೀಂದ್ರ ಗೌಡರವರು ಹಾಗೂ ಅಶ್ವಥ್ ನಾರಾಯಣಸ್ವಾಮಿ ರವರು, ಕೆಪಿಸಿಸಿ ಸದಸ್ಯರಾದ ಬಾಲಕೃಷ್ಣ ರೆಡ್ಡಿರವರು, ರಾಜ್ಯ ಪ್ರಚಾರ ಸಮಿತಿ ಸಂಯೋಜಕರಾದ ಕೆ ವಾಸುದೇವ ರೆಡ್ಡಿ ರವರು, ಮಂಗಮ್ಮನಪಾಳ್ಯ ವಾರ್ಡ್ ಅಧ್ಯಕ್ಷರಾದ ನಾರಾಯಣಸ್ವಾಮಿ ರವರು, ಮಂಗಮ್ಮನಪಾಳ್ಯ ಹೂ ವಾರ್ಡ್ ಮುಖಂಡರುಗಳಾದ ಜಗದೀಶ್ ಗೌಡ್ರು ಮತ್ತು ABW ನಾಗರಾಜ್ ರವರು ಕೆ ರಮೇಶ್ ರವರು ಎಂ ಆರ್ ರಾಘವೇಂದ್ರ ರವರು ಹಾಗೂ ಇನ್ನು ಅನೇಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.