ಬೆಂಗಳೂರು: ರಾಜ್ಯಪಾಲ ವಿ.ಆರ್.ವಾಲಾ ಅವರು ಇಂದು ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆರಂಭಿಸುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ
ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದರು.
ಬೆಳಗ್ಗೆ 11 ಗಂಟೆಗೆ ವಿಧಾನಮಂಡಲದ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜ್ಯಪಾಲ ವಿ.ಆರ್.ವಾಲಾ ಅವರು ಸದನವನ್ನು ಉದ್ದೇಶಿಸಿ ವಿಧಾನಸಭೆಗೆ ಆಗಮಿಸಿದರು.
ರಾಷ್ಟ್ರ ಗೀತೆ ಮುಗಿಯುತ್ತಿದ್ದಂತೆ ಭಾಷಣ ಓದಲು ಆರಂಭಿಸುತ್ತಿದ್ದಂತೆ ಬಿಜೆಪಿಯ ವಿಧಾನಸಭೆ ಮತ್ತು ವಿಧಾನಪರಿಷತ್‍ನ ಸದಸ್ಯರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಒಟ್ಟು 22 ಪುಟಗಳ ಭಾಷಣದಲ್ಲಿ ರಾಜ್ಯಪಾಲರು ಮೊದಲ ಒಂದು ಪುಟ್ಟ ನಂತರ ಕೊನೆಯ ಒಂದು ಪುಟವನ್ನು ಓದಿ ಭಾಷಣವನ್ನು ಮುಗಿಸಿದರು. ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದಾಗ ರಾಜ್ಯಪಾಲರು ಸಂಪೂರ್ಣವಾಗಿ ಓದಬೇಕೆ ಇಲ್ಲವೇ ಕೊನೆಯ ಪುಟವನ್ನು ಓದಬೇಕೆ ಎಂಬುದರ ಬಗ್ಗೆ ವಿಧಾನಸಭೆ ಸ್ಪೀಕರ್ ರಮೇಶ್‍ಕುಮರ್ ಅವರ ಸಲಹೆ ಕೇಳಿದರು.
ಕೊನೆಯ ಪುಟವನ್ನು ಓದಿ ಭಾಷಣವನ್ನು ಮುಗಿಸಿ ಎಂದು ಹೇಳುತ್ತಿದ್ದಂತೆ ರಾಜ್ಯಪಾಲರು ಭಾಷಣಕ್ಕೆ ನಿಲ್ಲಿಸಿದರು.
ಇದೊಂದು ರೈತ ವಿರೋಧಿ ಸರ್ಕಾರ. ಬಹುಮತವಿಲ್ಲದೆ ಬಜೆಟ್ ಮಂಡಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.