ಉಡುಪಿಯಲ್ಲಿ ‘ಭರ್ಜರಿ’ ಮಳೆ

ಉಡುಪಿಯಲ್ಲಿ  ‘ಭರ್ಜರಿ’ ಮಳೆ

ಉಡುಪಿ, ಜೂನ್. 13: ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನಿಂದ ಭಾರೀ ಮಳೆಯಾಗುತ್ತಿದ್ದು, ರಾತ್ರಿ ಸುರಿದ ಭರ್ಜರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಬಲವಾದ ಗಾಳಿ ಸಹಿತ ಸುರಿದ ಮಳೆಗೆ,ಮಣಿಪಾಲದ ಪ್ರಮುಖ ರಸ್ತೆಯಲ್ಲಿ ಮರಗಳು , ವಿದ್ಯುತ್‌ ಕಂಬಗಳು ಧರಾಶಾಹಿಯಾಗಿವೆ.

ಹಲವೆಡೆ ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡಬೇಕಾಗಿದೆ. ಉಡುಪಿಯಲ್ಲಿ ಭರ್ಜರಿ ಮಳೆ ಸುರಿದ ಕಾರಣ ಕೃಷ್ಣ ಮಠ ಮತ್ತು ನೂರಾನಿ ಮಸೀದಿ ಒಳಗೆ ನೀರು ನುಗ್ಗಿದೆ. ನೀರಿಲ್ಲದೆ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯ ಜನತೆಯಲ್ಲಿ ಭರ್ಜರಿ ಮಳೆ ಹರ್ಷ ತಂದಿದ್ದು, ಬಾವಿಗಳಲ್ಲಿ, ಕೆರೆ ಕಟ್ಟೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos