ರಸ್ತೆಗಳಲ್ಲಿ ನೀರಿನಿಂದ ತುಂಬಿರುವ ಗುಂಡಿಗಳು

ರಸ್ತೆಗಳಲ್ಲಿ ನೀರಿನಿಂದ ತುಂಬಿರುವ ಗುಂಡಿಗಳು

ಹೊಸಕೋಟೆ ತಾಲ್ಲೂಕು ಕಸಬಾ ಹೋಬಳಿಯ ಉಪ್ಪಾರಹಳ್ಳಿಯಿಂದ ಕಲ್ಲಹಳ್ಳಿಯ ಕಡೆಗೆ ಹೋಗುವ ರಸ್ತೆ ಇಂದು ಸಂಜೆ ಸುರಿದ ಮಳೆಯಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿದೆ.
ಉಪ್ಪಾರಹಳ್ಳಿಯಿಂದ ಕಲ್ಲಹಳ್ಳಿಯ ಕಡೆಗೆ ಹೋಗುವ ರಸ್ತೆ ಸಂಜೆ ಸುರಿದ ಮಳೆಯಿಂದ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು ಒಂದು ಅಡಿಯಷ್ಟು ಬಿದ್ದಿರುವ ಗುಂಡಿಯಲ್ಲಿ ನೀರು ತುಂಬಿಕೊಂಡು ದ್ವಿಚಕ್ರ ಸವಾರರಿಗೆ ತೊಂದರೆ ಯಾಗಿದ್ದರು. ಕಳೆದ ಎರಡು ವರ್ಷಗಳಿಂದ ಈ ರಸ್ತೆಯ ಬಗ್ಗೆ ಗ್ರಾಮಸ್ಥರುಗಳು ದೂರುಗಳನ್ನು ಸಲ್ಲಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ.

ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಗಳು ಇತ್ತ ಗಮನವೇ ಹರಿಸಿಲ್ಲ ಎಂದು ಗ್ರಮಸ್ಥರು ಆರೋಪಿಸಿದ್ದಾರೆ. ಇನ್ನು ಜನಪ್ರತಿನಿಧಿಗಳು ನೋಡಿದರು ನೋಡದಂತೆ ಇದ್ದಾರೆ ಸರ್ಕಾರಿ ಅಧಿಕಾರಿಗಳಾಗಲಿ ಅಥವಾ ಗ್ರಾಮ ಪಂಚಾಯ್ತಿಯವರಾಗಲಿ ಗಮನ ಹರಿಸದಿರುವುದು ದುರಾದ್ರುಷ್ಟಕರ ಎಂದು ಉಪ್ಪಾರಹಳ್ಳಿ ಮತ್ತು ಕಲ್ಲಹಳ್ಳಿ ಗ್ರಾಮಸ್ಥರ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos