ಬೆಂಗಳೂರು: ಕನ್ನಡಿಗರ ಮೇಲೆ ಮುನಿಸಿಕೊಂಡಿದ್ದ ವರುಣ ದೇವ ಈಗ ಒಂದಷ್ಟು ಕರುಣೆ ತೋರಿಸಿದ್ದು, ರಾಜ್ಯದಲ್ಲಿ ಬೇಸಿಗೆ ಬಿರು ಬಿಸಿಲಿನ ನಡುವೆ ಭಾರಿ ಮಳೆ ಶುರುವಾಗಿದೆ. ಕೆಲವು ವರ್ಷಗಳಿಂದ ಬೆಂಗಳೂರು & ಕರ್ನಾಟಕದ ಜನ ಭಾರಿ ಮಳೆಗೆ ಬೆಚ್ಚಿ ಬಿದ್ದಿದ್ದರು. ಅದ್ರಲ್ಲೂ ತಗ್ಗು ಪ್ರದೇಶದ ಜನಗಳಿಗೆ ಮಳೆ ನೀರು ಸಮಸ್ಯೆ ಕೊಟ್ಟಿತ್ತು ಆದರೆ ಕಳೆದ ವರ್ಷ ಮಳೆ ನಾಪತ್ತೆ. ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ಮೊದಲೇ ನೀರಿಗೆ ಕೊರತೆ ಉಂಟಾಗಿತ್ತು. ಜನರು ಹನಿ ಹನಿ ನೀರಿಗೂ ನರಳಿದ್ದರು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಮತ್ತೊಮ್ಮೆ ಮಳೆರಾಯ ಅಬ್ಬರಿಸಲು ಶುರು ಮಾಡಿದ್ದಾನೆ.
ವರುಣ ದೇವ ಹಿಂಗೇ ಮಾಡುತ್ತಾನೆ, ಮಳೆಯ ಅಗತ್ಯತೆ ಇರುವ ಕಡೆ ಮಳೆ ಬೀಳುವುದೇ ಇಲ್ಲ. ಇನ್ನು ಮಳೆ ಬೇಡ ಅನ್ನುವ ಕಡೆ ಭಾರಿ ಮಳೆ ಸುರಿಯುತ್ತದೆ. ಆದ್ರೆ ಈ ಬಾರಿ ಕನ್ನಡ ನಾಡಿನ ಜನತೆಗೆ ಭರ್ಜರಿಯಾಗಿ ಆಶೀರ್ವಾದ ಮಾಡಿದ್ದಾನೆ ಮಳೆರಾಯ.
ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಸೇರಿ ಕಲಬುರಗಿ ಭಾಗದಲ್ಲೂ ಭರ್ಜರಿ ಮಳೆ ಬಿದ್ದಿದೆ. ಇಂದು ಮತ್ತೆ ಕಲಬುರಗಿ ಜಿಲ್ಲೆಯಲ್ಲಿ ವರುಣ ಅಬ್ಬರಿಸಿದ್ದು, ಈ ಮೂಲಕ ಕನ್ನಡ ನಾಡಿನ ಜನತೆಗೆ ಭರ್ಜರಿ ಸುದ್ದಿ ಸಿಕ್ಕಿದೆ. ಹಾಗೇ ಮಲೆನಾಡು ಭಾಗದಲ್ಲಿ ಕೂಡ ಭಾರಿ ಮಳೆ ಶುರುವಾಗಿದೆ.