ಪೀಣ್ಯ ದಾಸರಹಳ್ಳಿ, ಆ. 28: ದಾಸರಹಳ್ಳಿ ಸಮೀಪ ರಾಮಯ್ಯ ಬಡಾವಣೆಯಲ್ಲಿರುವ ಜೆಡಿಎಸ್ ಕಛೇರಿ ಆವರಣದಲ್ಲಿ ವೃದ್ಧಾಪ್ಯ ವೇತನ ಹಾಗು ವಿಧವೆಯರ ವೇತನ ಪತ್ರಗಳನ್ನು ಫಲಾನುಭವಿಗಳಿಗೆ ಶಾಸಕ ಆರ್.ಮಂಜುನಾಥ ವಿತರಿಸಿದರು. ಶಾಸಕ ಮಂಜುನಾಥ್ ಮಾತನಾಡಿ ಸ್ಲಮ್ ಬೋರ್ಡ್ ಮನೆಗಳ ನಿರ್ಮಾಣ ಮುಗಿಯುವ ಹಂತದಲ್ಲಿದೆ. ಅವುಗಳನ್ನು ಫಲಾನುಭವಿಗಳಿಗೆ ಕೊಡಲಾಗುವುದು ಎಂದು ಹೇಳಿದರು.
ಈ ಸಮಯದಲ್ಲಿ ಗುಂಡಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎನ್. ಜಗದೀಶ್, ಮಲ್ಲಸಂದ್ರ ವಾರ್ಡ್ ಉಸ್ತುವಾರಿ ಭಾಸ್ಕರ್, ಆದ್ಯ ಫೌಂಡೇಶನ್ ಮುಖ್ಯವಾ ಸ್ಥಾಪಕ ಕಿರಣ್ ಕುಮಾರ್, ವಿಜಯ್ ಕುಮಾರ್, ಗುರುಪ್ರಸಾದ್, ಹನುಮಂತರಾಯಪ್ಪ ಇನ್ನು ಮುಂತಾದ ನಾಯಕರು ಉಪಸ್ಥಿತರಿದ್ದರು.